Jeremiah 50:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಾಬಿಲೋನೇ, ನಾನು ನಿನಗಾಗಿ ಒಂದು ಘಲೆಯನ್ನು ಒಡ್ಡಿದೆ. ನೀನು ತಿಳಿಯದೆ ಸಿಕ್ಕಿಹಾಕಿಕೊಂಡೆ. ನೀನು ಯೆಹೋವನ ವಿರುದ್ಧ ಹೋರಾಡಿದೆ. ಆದ್ದರಿಂದ ನಿನ್ನನ್ನು ಹುಡುಕಿ ವಶಪಡಿಸಿಕೊಳ್ಳಲಾಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಾಬೆಲೇ, ನಾನು ನಿನಗೆ ಉರುಲೊಡ್ಡಿದೆನು; ನೀನು ತಿಳಿಯದೆ ಸಿಕ್ಕಿಕೊಂಡಿ; ನೀನು ಯೆಹೋವನೊಂದಿಗೆ ಹೋರಾಡಿದ್ದರಿಂದ ಬೋನಿಗೆ ಬಿದ್ದು ವಶವಾದಿ.
Kannada BSI Bible 2016
ಬಾಬೆಲಿಗೂ ಕಸ್ದೀಯರ ನಿವಾಸಿಗಳೆಲ್ಲ ರಿಗೂ--ಅವರು ಚೀಯೋನಿನಲ್ಲಿ ನಿಮ್ಮ ಸನ್ನಿಧಿಯಲ್ಲಿ ಮಾಡಿದ ಕೇಡನ್ನೆಲ್ಲಾ ಸಲ್ಲಿಸುವೆನೆಂದು ಕರ್ತನು ಅನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಾಬೆಲೇ, ನಾನು ನಿನಗೆ ಉರುಲೊಡ್ಡಿದೆನು; ನೀನು ತಿಳಿಯದೆ ಸಿಕ್ಕಿಕೊಂಡಿ; ನೀನು ಯೆಹೋವನೊಂದಿಗೆ ಹೋರಾಡಿದ್ದರಿಂದ ಬೋನಿಗೆ ಬಿದ್ದು ವಶವಾದಿ.
Kannada Bible (KNCL) BSI 2016
ಬಾಬಿಲೋನೇ, ನಿನಗೆ ನಾನು ಉರುಲೊಡ್ಡಿದ್ದೆ. ನೀನು ತಿಳಿಯದೆ ಅದರಲ್ಲಿ ಸಿಕ್ಕಿಕೊಂಡೆ. ನೀನು ಸರ್ವೇಶ್ವರನೊಂದಿಗೆ ಹೋರಾಡಿದ್ದರಿಂದ ಬೋನಿನ ವಶವಾದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಬೋನನ್ನು ಇಟ್ಟೆನು; ಹೌದು, ಬಾಬಿಲೋನೇ ನೀನು ಸಿಕ್ಕಿಕೊಂಡೆ. ಆದರೆ ನಿನಗೆ ತಿಳಿಯದೆ ಇತ್ತು. ನೀನು ಯೆಹೋವ ದೇವರಿಗೆ ವಿರೋಧವಾಗಿ ಜಗಳವಾಡಿದ್ದರಿಂದಲೇ ಸಿಕ್ಕಿಕೊಂಡೆ ಮತ್ತು ವಶವಾದೆ.