Jeremiah 50:40 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದೇವರು ಸೊದೋಮ್ ಗೊಮೋರ ನಗರಗಳನ್ನೂ ಅವುಗಳ ಸುತ್ತಮುತ್ತಲಿನ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದನು. ಈಗ ಅಲ್ಲಿ ಯಾರೂ ವಾಸಿಸುವದಿಲ್ಲ. ಅದೇ ರೀತಿ ಬಾಬಿಲೋನಿನಲ್ಲಿ ಯಾರೂ ವಾಸಮಾಡುವದಿಲ್ಲ. ವಾಸಮಾಡಲು ಅಲ್ಲಿಗೆ ಯಾರೂ ಹೋಗುವದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವರು ಕೆಡವಿದ ಸೊದೋಮ್, ಗೊಮೋರ ಪಟ್ಟಣಗಳಲ್ಲಿಯೂ ಮತ್ತು ಸುತ್ತಣ ಊರುಗಳಲ್ಲಿಯೂ ಹೇಗೋ, ಹಾಗೆಯೇ ಬಾಬೆಲಿನಲ್ಲಿಯೂ ಯಾರೂ ವಾಸಿಸರು, ಯಾವ ನರಪ್ರಾಣಿಯೂ ನೆಲೆ ನಿಲ್ಲುವುದಿಲ್ಲ.
Kannada BSI Bible 2016
ಕುರಿಮರಿಗಳ ಹಾಗೆ ಟಗರು ಗಳ ಹೋತಗಳ ಹಾಗೆ ಅವರನ್ನು ಕೊಲೆಗೆ ಇಳಿಸುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರು ಕೆಡವಿದ ಸೊದೋಮ್ ಗೊಮೋರ ಪಟ್ಟಣಗಳಲ್ಲಿಯೂ ಸುತ್ತಣ ಊರುಗಳಲ್ಲಿಯೂ ಹೇಗೋ ಹಾಗೆಯೇ ಬಾಬೆಲಿನಲ್ಲಿಯೂ ಯಾರೂ ವಾಸಿಸರು, ಯಾವ ನರಪ್ರಾಣಿಯೂ ಇಳಕೊಳ್ಳನು.
Kannada Bible (KNCL) BSI 2016
ಯಾರೂ ನೆಲಸಲಾಗಲಿಲ್ಲ ನಾನು ಕೆಡವಿದಾ ಸೊದೋಮ್ ಗೊಮೋರ ನಗರಗಳಲ್ಲಿ ಅದರ ಸುತ್ತಮುತ್ತಣ ಊರುಗಳಲ್ಲಿ ಯಾರೂ ವಾಸಿಸರು ಯಾವ ನರಪ್ರಾಣಿಯೂ ನೆಲಸದು, ಬಾಬಿಲೋನಿನಲ್ಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಾನು ಕೆಡವಿದ ಸೊದೋಮ್ ಗೊಮೋರ ಪಟ್ಟಣಗಳಲ್ಲಿಯೂ ಅವುಗಳ ಸುತ್ತಣ ಪಟ್ಟಣಗಳಲ್ಲಿಯೂ ಹೇಗೋ ಹಾಗೆಯೇ, ಎದೋಮಿನಲ್ಲಿಯೂ ಯಾರೂ ವಾಸಮಾಡುವುದಿಲ್ಲ; ಅದರಲ್ಲಿ ಯಾವ ನರಪ್ರಾಣಿಯೂ ತಂಗುವುದಿಲ್ಲ” ಎಂದು ಯೆಹೋವ ದೇವರು ಅನ್ನುತ್ತಾರೆ.