Jeremiah 51:13 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಾಬಿಲೋನೇ, ನೀನು ಸಮೃದ್ಧವಾದ ನೀರಿನ ಹತ್ತಿರ ಇರುವೆ. ನೀನು ಸಂಪತ್ತಿನಿಂದ ಸಮೃದ್ಧವಾಗಿರುವೆ. ಆದರೆ ಒಂದು ಜನಾಂಗವಾಗಿ ನೀನು ಘಹಳ ಕಾಲ ಮುಂದುವರೆಯಲಾರೆ. ನಿನ್ನ ವಿನಾಶ ಕಾಲ ಸಮೀಪಿಸಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಹಾ, ಬಹುಜಲಾಶ್ರಯಗಳ ಮಧ್ಯೆ ನಿವಾಸಿನಿಯಾಗಿರುವ ನಗರವೇ, ಧನಭರಿತಪುರವೇ, ನಿನ್ನ ಅಂತ್ಯವು ಬಂದಿದೆ, ನೀನು ಸೂರೆಮಾಡಿದ್ದು ಸಾಕು.
Kannada BSI Bible 2016
ಕರ್ತನ ಆಲಯವನ್ನೂ ಅರಸನ ಮನೆಯನ್ನೂ ಯೆರೂಸಲೇಮಿನ ಎಲ್ಲಾ ಮನೆಗಳನ್ನೂ ದೊಡ್ಡವರ ಎಲ್ಲಾ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು;
Kannada BSI JV (ಕನ್ನಡ ಸತ್ಯವೇದವು J.V. (BSI))
ಆಹಾ, ಬಹುಜಲಮಧ್ಯನಿವಾಸಿನಿಯಾದ ನಗರಿಯೇ, ಧನಭರಿತ ಪುರಿಯೇ, ನಿನ್ನ ಅಂತ್ಯವು ಬಂದಿದೆ, ನೀನು ಸೂರೆಮಾಡಿದ್ದು ಸಾಕು.
Kannada Bible (KNCL) BSI 2016
“ಬಹುಜಲಾಶ್ರಯಗಳ ನಡುವೆ ನಿಂತಿರುವ ನಗರಿಯೇ, ಧನಭರಿತ ಪುರಿಯೇ, ನಿನ್ನ ಅಂತ್ಯಕಾಲವು ಬಂದಿದೆ. ನೀನು ಕೊಳ್ಳೆಹೊಡೆದದ್ದು ಸಾಕಾಗಿದೆ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, ಬಹಳ ದ್ರವ್ಯಗಳುಳ್ಳವಳೇ, ನಿನ್ನ ಅಂತ್ಯವೂ, ನಿನ್ನ ನಾಶನದ ಕಾಲವು ಬಂತು.