Jeremiah 51:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ಯಾಕೋಘ್ಯರ ಸಾಬಸ್ತ್ಯವಾದಾತನು ಆ ನಿಷ್ಪ್ರಯೋಜಕ ವಿಗ್ರಹಗಳಂತಲ್ಲ. ಜನರು ದೇವರನ್ನು ಸೃಷ್ಟಿಸಲಿಲ್ಲ. ದೇವರು ತನ್ನ ಜನರನ್ನು ಸೃಷ್ಟಿಸಿದನು. ದೇವರು ಎಲ್ಲವನ್ನು ಸೃಷ್ಟಿಸಿದನು. ಆತನ ಹೆಸರು ಸರ್ವಶಕ್ತನಾದ ಯೆಹೋವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಕೋಬ್ಯರ ಸ್ವಾಸ್ತ್ಯವಾದಾತನು ಅವುಗಳ ಹಾಗಲ್ಲ; ಆತನು ಸಮಸ್ತವನ್ನೂ ನಿರ್ಮಿಸಿದವನು; ಇಸ್ರಾಯೇಲು ಆತನ ಸ್ವಾಸ್ತ್ಯವಾದ ವಂಶ; ಸೇನಾಧೀಶ್ವರನಾದ ಯೆಹೋವನೆಂಬುದೇ ಆತನ ಹೆಸರು.
Kannada BSI Bible 2016
ಇದಲ್ಲದೆ ಬೋಗುಣಿಗಳನ್ನೂ ಅಗ್ನಿಪಾತ್ರೆಗಳನ್ನೂ ಬಟ್ಟಲುಗ ಳನ್ನೂ ಗುಡಾಣಗಳನ್ನೂ ದೀಪಸ್ತಂಭಗಳನ್ನೂ ಸೌಟುಗ ಳನ್ನೂ ಬಟ್ಟಲುಗಳನ್ನೂ ಬಂಗಾರದ್ದಾದರೆ, ಅದರ ಬಂಗಾರವನ್ನೂ ಬೆಳ್ಳಿಯದ್ದಾದರೆ, ಅದರ ಬೆಳ್ಳಿಯನ್ನೂ ಕಾವಲಿನ ಅಧಿಪತಿಯು ತಕ್ಕೊಂಡನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಕೋಬ್ಯರ ಸ್ವಾಸ್ತ್ಯವಾದಾತನು ಅವುಗಳ ಹಾಗಲ್ಲ; ಆತನು ಸಮಸ್ತವನ್ನೂ ನಿರ್ಮಿಸಿದವನು; ಇಸ್ರಾಯೇಲು ಆತನ ಸ್ವಾಸ್ತ್ಯವಾದ ವಂಶ; ಸೇನಾಧೀಶ್ವರನಾದ ಯೆಹೋವನೆಂಬದು ಆತನ ನಾಮಧೇಯ.
Kannada Bible (KNCL) BSI 2016
ಯಕೋಬ್ಯರಿಗೆ ಸ್ವಂತವಾದ ದೇವರು ಅವುಗಳ ಹಾಗಲ್ಲ ಆತ ಸಮಸ್ತವನ್ನು ಸೃಷ್ಟಿಸಿದಾತ ಆತನ ಸೊತ್ತು ಇಸ್ರಯೇಲ್ ವಂಶ ‘ಸೇನಾಧೀಶ್ವರ ಸರ್ವೇಶ್ವರ’ ಎಂಬುದು ಆತನ ನಾಮಧೇಯ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಕೋಬ್ಯರ ಪಾಲಾಗಿರುವವರು ಇವುಗಳ ಹಾಗಲ್ಲ; ಏಕೆಂದರೆ ಅವರು ಎಲ್ಲವನ್ನು ರೂಪಿಸಿದವರೇ, ಇಸ್ರಾಯೇಲ್ ಅವರ ಸ್ವಾಸ್ತ್ಯವಾದ ವಂಶ. ಅವರ ಹೆಸರು ಸೇನಾಧೀಶ್ವರ ಯೆಹೋವ ದೇವರೇ.