Jeremiah 51:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಾಬಿಲೋನಿನ ಸೈನಿಕರು ಕಾದಾಡುವದನ್ನು ನಿಲ್ಲಿಸಿದ್ದಾರೆ. ಅವರು ತಮ್ಮ ಕೋಟೆಗಳಲ್ಲಿದ್ದಾರೆ. ಅವರ ಘಲ ನಷ್ಟವಾಗಿದೆ. ಅವರು ಭಯಪಟ್ಟ ಹೆಂಗಸಿನಂತಾಗಿದ್ದಾರೆ. ಬಾಬಿಲೋನಿನ ಮನೆಗಳು ಉರಿಯುತ್ತಿವೆ. ಅದರ ಬಾಗಿಲಿನ ಅಗುಳಿಗಳು ಮುರಿದುಹೋಗಿವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಾಬೆಲಿನ ಶೂರರು ಯುದ್ಧಕ್ಕೆ ಹಿಂದೆಗೆದು ಹೆಂಗಸರಂತೆ ಬಲಹೀನರಾಗಿ ತಮ್ಮ ಕೋಟೆಗಳಲ್ಲಿ ನಿಂತಿದ್ದಾರೆ; ಅದರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ, ಅವರ ಅಗುಳಿಗಳು ಮುರಿದುಹೋಗಿವೆ.
Kannada BSI Bible 2016
ನೆಬೂ ಕದ್ನೆಚ್ಚರನ ಇಪ್ಪತ್ತು ಮೂರನೇ ವರುಷದಲ್ಲಿ ಕಾವಲಿನ ಅಧಿಪತಿಯಾದ ನೆಬೂಜರದಾನನು ಏಳುನೂರು ನಾಲ್ವತ್ತೈದು ಮಂದಿ ಯೆಹೂದ್ಯರನ್ನು ಒಯ್ದನು. ಜನರೆಲ್ಲರು ನಾಲ್ಕು ಸಾವಿರದ ಆರುನೂರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಾಬೆಲಿನ ಶೂರರು ಯುದ್ಧಕ್ಕೆ ಹಿಂದೆಗೆದು ಹೆಂಗಸರಂತೆ ಅಬಲರಾಗಿ ತಮ್ಮ ಕೋಟೆಗಳಲ್ಲಿ ನಿಂತಿದ್ದಾರೆ; ಅದರ ಮನೆಗಳಿಗೆ ಬೆಂಕಿಯಿಕ್ಕಿದೆ, ಅದರ ಅಗುಳಿಗಳು ಮುರಿದುಹೋಗಿವೆ;
Kannada Bible (KNCL) BSI 2016
ಬಾಬಿಲೋನಿಯದ ಶೂರರು ಯುದ್ಧಕ್ಕೆ ಹಿಂಜರಿದು ಹೆಂಗಸರಂತೆ, ಹೇಡಿಗಳಂತೆ ತಮ್ಮ ಕೋಟೆಗಳಲ್ಲೆ ನಿಂತಿದ್ದಾರೆ. ಅದರ ಹೆಬ್ಬಾಗಿಲುಗಳು ಮುರಿದುಬಿದ್ದಿವೆ. ಅದರ ಮನೆಗೆ ಬೆಂಕಿಯಿಕ್ಕಲಾಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಬಿಲೋನಿನ ಪರಾಕ್ರಮಶಾಲಿಗಳು ಯುದ್ಧಮಾಡುವುದನ್ನು ಬಿಟ್ಟಿದ್ದಾರೆ; ಅವರ ಭದ್ರಸ್ಥಾನಗಳಲ್ಲಿ ನಿಂತಿದ್ದಾರೆ. ಅವರ ಪರಾಕ್ರಮತನ ತಪ್ಪಿತು; ಅವರು ಬಲಹೀನರಾಗಿದ್ದಾರೆ. ಆ ದೇಶದ ನಿವಾಸಗಳನ್ನು ಸುಟ್ಟಿದ್ದಾರೆ; ಅದರ ಹೆಬ್ಬಾಗಿಲುಗಳು ಮುರಿದುಹೋಗಿವೆ.