Jeremiah 51:33 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆನ್ನುವನು: “ಬಾಬಿಲೋನಿನ ನಗರವು ಒಂದು ಕಣದಂತೆ ಇದೆ. ಸುಗ್ಗಿಕಾಲದಲ್ಲಿ ಜನರು ಕಾಳನ್ನು ಹೊಟ್ಟಿನಿಂದ ಙೇರ್ಪಡಿಸುವದಕ್ಕಾಗಿ ಅದನ್ನು ಘಡಿಯುತ್ತಾರೆ. ಬಾಬಿಲೋನಿನ ಸುಗ್ಗಿಕಾಲ (ವಿನಾಶ ಕಾಲ) ಹತ್ತಿರವಾಗುತ್ತಲಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, “ಬಾಬೆಲ್ ಪುರಿಯು ತುಳಿದು ತುಳಿದು ಸರಿಮಾಡುತ್ತಿರುವ ಕಣದಂತಿದೆ; ಸ್ವಲ್ಪ ಕಾಲವಾದ ಮೇಲೆ ಒಕ್ಕುವ ಸಮಯವು ಅದಕ್ಕೆ ಸಂಭವಿಸುವುದು.
Kannada BSI Bible 2016
ಆಗ ಅವನು ಬದುಕಿದ ದಿನಗಳೆಲ್ಲಾ ಯಾವಾಗಲೂ ಅವನ ಮುಂದೆ ಊಟಮಾಡುತ್ತಿದ್ದನು.ಅವನ ಆಹಾರದ ವಿಷಯ ವೇನಂದರೆ--ಅವನು ಬದುಕಿದ ದಿನಗಳೆಲ್ಲಾ ಅವನು ಸಾಯುವ ದಿನದವರೆಗೆ ದಿನದಿನಕ್ಕೆ ತಕ್ಕ ಆಹಾರವು ಯಾವಾಗಲೂ ಬಾಬೆಲಿನ ಅರಸನ ಕಡೆಯಿಂದ ಕೊಡಲ್ಪಡುತ್ತಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ಬಾಬೆಲ್ ಪುರಿಯು ತುಳಿದು ತುಳಿದು ಸರಿಮಾಡುತ್ತಿರುವ ಕಣದಂತಿದೆ; ಸ್ವಲ್ಪ ಕಾಲವಾದ ಮೇಲೆ ಒಕ್ಕುವ ಸಮಯವು ಅದಕ್ಕೆ ಸಂಭವಿಸುವದು.
Kannada Bible (KNCL) BSI 2016
ಬಾಬಿಲೋನ್ ನಗರವು ತುಳಿದು ತುಳಿದು ಸರಿಮಾಡಿದ ಕಣದಂತಿದೆ. ಇಷ್ಟರಲ್ಲೆ ಕೊಯ್ಲುಕಾಲ ಅದಕ್ಕೆ ಸಂಭವಿಸಲಿದೆ; ಇದು ಇಸ್ರಯೇಲರ ದೇವರೂ ಸೇನಾಧೀಶ್ವರನೂ ಆದ ಸರ್ವೇಶ್ವರನ ನುಡಿ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಏಕೆಂದರೆ ಇಸ್ರಾಯೇಲಿನ ದೇವರೂ, ಸರ್ವಶಕ್ತರಾಗಿರುವ ಯೆಹೋವ ದೇವರೂ ಹೇಳುವುದೇನೆಂದರೆ: “ತುಳಿಯುವ ವೇಳೆಯಲ್ಲಿ ಕಣವು ಹೇಗೋ, ಹಾಗೆಯೇ ಬಾಬಿಲೋನಿನ ಮಗಳು ಇದ್ದಾಳೆ. ಇನ್ನು ಸ್ವಲ್ಪ ಕಾಲವಾದ ಮೇಲೆ ಅವಳಿಗೆ ಸುಗ್ಗಿಕಾಲ ಬರುವುದು.”