Jeremiah 51:37 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಾಬಿಲೋನು ನಾಶವಾದ ಕಟ್ಟಡಗಳ ಗುಡ್ಡೆಯಾಗುವುದು. ಬಾಬಿಲೋನು ಕಾಡುನಾಯಿಗಳ ನಿವಾಸವಾಗುವುದು. ಜನರು ಕಲ್ಲುಘಂಡೆಗಳ ಗುಡ್ಡೆಯನ್ನು ನೋಡಿ ಆಶ್ಚರ್ಯಪಡುವರು. ಬಾಬಿಲೋನಿನ ಬಗ್ಗೆ ಜನರು ತಲೆಯಾಡಿಸುವರು. ಬಾಬಿಲೋನು ನಿರ್ಜನ ಪ್ರದೇಶವಾಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಬಾಬೆಲ್ ಹಾಳುದಿಬ್ಬಗಳಿಂದ ತುಂಬುವುದು ಮತ್ತು ನರಿಗಳ ಬೀಡಾಗಿರುವುದು; ಅದು ನಿರ್ಜನವಾಗಿ ಪರಿಹಾಸ್ಯಕ್ಕೆ ಗುರಿಯಾಗುವುದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಬಾಬೆಲು ಹಾಳುದಿಬ್ಬಗಳೂ ನರಿಗಳ ಹಕ್ಕೆಯೂ ಆಗಿರುವದು; ಅದು ನಿರ್ಜನವಾಗಿ ಬೆರಗಿನ ಸಿಳ್ಳಿಗೆ ಗುರಿಯಾಗುವದು.
Kannada Bible (KNCL) BSI 2016
ಆಗ ಬಾಬಿಲೋನ್ ಹಾಳುದಿಬ್ಬ ಆಗುವುದು. ಗುಳ್ಳೆನರಿಗಳ ಬೀಡಾಗುವುದು. ಅದು ಭಯಭೀತಿಗೂ ಸೀಳು ಪರಿಹಾಸ್ಯಕ್ಕೂ ಆಸ್ಪದವಾಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಬಿಲೋನ್ ದಿಬ್ಬಗಳಾಗುವುದು. ನಿವಾಸಿಗಳು ಇಲ್ಲದೆ ನರಿಗಳ ವಾಸಸ್ಥಳವಾಗಿ ಆಶ್ಚರ್ಯಕ್ಕೂ, ನಾಶಕ್ಕೂ, ಸಿಳ್ಳಿಡುವಿಕೆಗೂ ಒಳಗಾಗುವುದು.