Jeremiah 51:39 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ಜನರು ಘಲಶಾಲಿಗಳಾದ ಸಿಂಹಗಳಂತೆ ವರ್ತಿಸುತ್ತಿದ್ದಾರೆ. ನಾನು ಅವರಿಗೊಂದು ಔತಣವನೆಐರ್ಪಡಿಸುವೆನು. ಅವರಿಗೆ ಮತ್ತೇರುವಂತೆ ಕುಡಿಸುವೆನು. ಅವರು ನಗುನಗುತ್ತಾ ಸಂತೋಷದಿಂದ ಕಾಲ ಕಳೆಯುವರು. ಆಮೇಲೆ ಅವರು ಶಾಶ್ವತವಾಗಿ ಮಲಗುವರು. ಅವರು ಮತ್ತೆ ಏಳಲಾರರು.” ಇದು ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ಹೊಟ್ಟೆಬಾಕರು, ನಾನು ಅವರಿಗೆ ಔತಣವನ್ನು ಸಿದ್ಧಪಡಿಸುವೇನು, ಅವರು ಅದರಿಂದ ಸಂಭ್ರಮಪಟ್ಟು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವಂತೆ ತಲೆಗೇರುವ ಮಟ್ಟಿಗೆ ಕುಡಿಸುವೆನು. ಇದು ಯೆಹೋವನ ನುಡಿ” ಎಂಬುದೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ಉರಿಗೊಂಡಿರುವಾಗ ನಾನು ಅವರಿಗೆ ಔತಣವನ್ನು ಸಿದ್ಧಪಡಿಸಿ ಅವರು ಅದರಿಂದ ಸಂಭ್ರಮಪಟ್ಟು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವಂತೆ ತಲೆಗೇರ ಕುಡಿಸುವೆನು. ಇದು ಯೆಹೋವನ ನುಡಿ.
Kannada Bible (KNCL) BSI 2016
ಅವರು ಹೊಟ್ಟೆಬಾಕರೇ ಸರಿ. ಅವರಿಗೆ ಔತಣವನ್ನು ಸಿದ್ಧಮಾಡುವೆನು. ತಿಂದು ಸಂಭ್ರಮಪಡುವಂತೆ ಮಾಡುವೆನು. ತಲೆಗೇರುವತನಕ ಕುಡಿಸಿ ಎಂದಿಗೂ ಎಚ್ಚರಗೊಳ್ಳದೆ ಚಿರನಿದ್ರೆಯಲ್ಲಿರುವಂತೆ ಮಾಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಉರಿಗೊಂಡಿರುವಾಗ, ನಾನು ಅವರಿಗೆ ಔತಣವನ್ನು ಸಿದ್ಧಪಡಿಸಿ, ಅವರು ಅದರಿಂದ ಸಂಭ್ರಮಪಟ್ಟು, ಎಂದಿಗೂ ಎಚ್ಚರಗೊಳ್ಳದೆ, ದೀರ್ಘ ನಿದ್ರೆ ಮಾಡುವಂತೆ ತಲೆಗೇರುವತನಕ ಕುಡಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.