Jeremiah 51:48 — Compare Translations
5 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಭೂಮ್ಯಾಕಾಶಗಳು ಮತ್ತು ಅವುಗಳಲ್ಲಿರುವ ಸಮಸ್ತ ವಸ್ತುಗಳು ಬಾಬಿಲೋನಿನ ಬಗ್ಗೆ ಹರ್ಷಧ್ವನಿ ಮಾಡುವವು. ಏಕೆಂದರೆ ಸೈನ್ಯವು ಉತ್ತರದಿಂದ ಘಂದಿತು, ಬಾಬಿಲೋನಿನ ವಿರುದ್ಧ ಯುದ್ಧಮಾಡಿತು” ಇದು ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಭೂಮ್ಯಾಕಾಶಗಳೂ ಅಲ್ಲಿನ ಸಮಸ್ತವೂ ಬಾಬೆಲಿನ ನಾಶವನ್ನು ನೋಡಿ ಹರ್ಷಧ್ವನಿಗೈಯುವವು; ಏಕೆಂದರೆ ಹಾಳುಮಾಡುವವರು ಉತ್ತರ ದಿಕ್ಕಿನಿಂದ ಬಂದು ಅದರ ಮೇಲೆ ಬೀಳುವರು; ಇದು ಯೆಹೋವನ ನುಡಿ.”
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಭೂಮ್ಯಾಕಾಶಗಳೂ ಅಲ್ಲಿನ ಸಮಸ್ತವೂ ಬಾಬೆಲಿನ ನಾಶನವನ್ನು ನೋಡಿ ಹರ್ಷಧ್ವನಿಗೈಯುವವು; ಏಕಂದರೆ ಹಾಳುಮಾಡುವವರು ಬಡಗಲಿಂದ ಬಂದು ಅದರ ಮೇಲೆ ಬೀಳುವರು; ಇದು ಯೆಹೋವನ ನುಡಿ.
Kannada Bible (KNCL) BSI 2016
ಆಗ ಭೂಮಿ ಆಕಾಶಗಳೂ ಅಲ್ಲಿನ ಸಮಸ್ತವೂ ಬಾಬಿಲೋನಿನ ನಾಶ ನೋಡಿ ಜಯಘೋಷಮಾಡುವುವು. ಹಾಳುಮಾಡುವರು, ಉತ್ತರದಿಂದ ಬಂದು ಹಾಳುಮಾಡುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಭೂಮಿ ಆಕಾಶಗಳೂ, ಅಲ್ಲಿನ ಸಮಸ್ತವೂ ಬಾಬಿಲೋನಿನ ನಾಶವನ್ನು ನೋಡಿ ಜಯಘೋಷ ಮಾಡುವುವು. ಹಾಳುಮಾಡುವರು, ಉತ್ತರದಿಂದ ಬಂದು ಹಾಳುಮಾಡುವರು,” ಎಂದು ಯೆಹೋವ ದೇವರು ಹೇಳುತ್ತಾರೆ.