Jeremiah 51:57 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಬಾಬಿಲೋನಿನ ಮುಖ್ಯ ಅಊಕಾರಿಗಳಿಗೂ ಪಂಡಿತರಿಗೂ ದ್ರಾಕ್ಷಾರಸ ಕುಡಿಯುವಂತೆ ಮಾಡುತ್ತೇನೆ. ಅಲ್ಲಿಯ ಅಊಪತಿಗಳಿಗೂ ಅಊಕಾರಿಗಳಿಗೂ ಸೈನಿಕರಿಗೂ ದ್ರಾಕ್ಷಾರಸ ಕುಡಿಸುತ್ತೇನೆ. ಆಮೇಲೆ ಅವರು ಶಾಶ್ವತವಾಗಿ ಮಲಗಿಬಿಡುತ್ತಾರೆ. ಅವರು ಎಚ್ಚರಗೊಳ್ಳುವುದೇ ಇಲ್ಲ.” ಸರ್ವಶಕ್ತನಾದ ಯೆಹೋವನೆಂಘ ನಾಮಧೇಯದ ರಾಜಾಊರಾಜನ ನುಡಿಯಿದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಅದರ ಪ್ರಧಾನರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಬಲಿಷ್ಠರು, ಇವರೆಲ್ಲರಿಗೂ ತಲೆಗೇರುವ ಮಟ್ಟಿಗೆ ಕುಡಿಸುವೆನು; ಅವರು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವರು ಎಂದು ಸೇನಾಧೀಶ್ವರನಾದ ಯೆಹೋವನೆಂಬ ಹೆಸರಿನ ರಾಜಾಧಿರಾಜನು ಅನ್ನುತ್ತಾನೆ.”
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಅದರ ಪ್ರಧಾನರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಬಲಿಷ್ಠರು, ಇವರೆಲ್ಲರಿಗೂ ತಲೆಗೇರ ಕುಡಿಸುವೆನು; ಅವರು ಎಂದಿಗೂ ಎಚ್ಚರಗೊಳ್ಳದೆ ದೀರ್ಘನಿದ್ರೆಮಾಡುವರು ಎಂದು ಸೇನಾಧೀಶ್ವರನಾದ ಯೆಹೋವನಾಮಧೇಯದ ರಾಜಾಧಿರಾಜನು ಅನ್ನುತ್ತಾನೆ.
Kannada Bible (KNCL) BSI 2016
ಬಾಬಿಲೋನಿನ ರಾಜ್ಯಪಾಲರು, ಮಂತ್ರಿಗಳು, ಅಧಿಪತಿಗಳು, ಅಧಿಕಾರಿಗಳು, ಯೋಧರು, ಇವರೆಲ್ಲರಿಗೆ ತಲೆಗೇರುವ ತನಕ ಕುಡಿಸುವೆನು. ಅವರು ಎಂದೆಂದಿಗೂ ಎಚ್ಚರಗೊಳ್ಳದೆ ಚಿರನಿದ್ರೆ ಮಾಡುವರು ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರನೆಂಬ ರಾಜಾಧಿರಾಜರು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ನಾನು ಅವಳ ಪ್ರಧಾನರನ್ನೂ, ಅವಳ ಜ್ಞಾನಿಗಳನ್ನೂ, ಅವಳ ಅಧಿಪತಿಗಳನ್ನೂ, ಅವಳ ಅಧಿಕಾರಿಗಳನ್ನೂ, ಅವಳ ಪರಾಕ್ರಮಶಾಲಿಗಳನ್ನೂ ಮತ್ತರಾಗಿ ಮಾಡುತ್ತೇನೆ. ಅವರು ನಿತ್ಯ ನಿದ್ರೆ ಮಾಡುವರು, ಎಚ್ಚರವಾಗುವುದಿಲ್ಲ,” ಎಂದು ಸೇನಾಧೀಶ್ವರ ಯೆಹೋವ ದೇವರು ಎಂಬ ಹೆಸರುಳ್ಳ ರಾಜಾಧಿರಾಜರು ಸಾರುತ್ತಾರೆ.