Jeremiah 51:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾವು ಬಾಬಿಲೋನನ್ನು ವಾಸಿಮಾಡುವ ಪ್ರಯತಐ ಮಾಡಿದೆವು. ಆದರೆ ಅದನ್ನು ವಾಸಿಮಾಡಲು ಆಗುವದಿಲ್ಲ. ಆದ್ದರಿಂದ ಅದನ್ನು ಬಿಟ್ಟುಬಿಡೋಣ. ನಾವು ನಮ್ಮನಮ್ಮ ದೇಶಗಳಿಗೆ ಹೋಗೋಣ. ಪರಲೋಕದ ದೇವರು ಬಾಬಿಲೋನಿಗೆ ವಿಊಸಙೇಕಾದ ಶಿಕ್ಷೆಯನ್ನು ನಿರ್ಧರಿಸುವನು. ಬಾಬಿಲೋನಿಗೆ ಏನಾಗಙೇಕೆಂಬುದನ್ನು ಆತನು ನಿರ್ಧರಿಸುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಾಬೆಲನ್ನು ಸ್ವಸ್ಥಮಾಡುವುದಕ್ಕೆ ನಾವು ಪ್ರಯತ್ನಪಟ್ಟರೂ ಅದು ಸ್ವಸ್ಥವಾಗಲಿಲ್ಲ; ಬಾಬೆಲನ್ನು ಬಿಟ್ಟು ನಾವೆಲ್ಲರೂ ನಮ್ಮ ನಮ್ಮ ದೇಶಗಳಿಗೆ ಹೋಗೋಣ; ಅದು ಹೊಂದಬೇಕಾದ ದಂಡನೆಯು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ, ಹೌದು, ಗಗನದವರೆಗೂ ಬೆಳೆದಿದೆ.
Kannada BSI Bible 2016
ಆಗ ಅವರು ಅರಸನನ್ನು ಹಿಡಿದು, ಬಾಬೆಲಿನ ಅರಸನ ಬಳಿಗೆ ಹಮಾತ್‌ ದೇಶದಲ್ಲಿರುವ ರಿಬ್ಲಕ್ಕೆ ತಕ್ಕೊಂಡು ಹೋದರು; ಅಲ್ಲಿ ಅವನು ಅವನ ವಿಷಯ ನ್ಯಾಯತೀರ್ಪು ಮಾಡಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಾಬೆಲನ್ನು ಸ್ವಸ್ಥಮಾಡುವದಕ್ಕೆ ನಾವು ಪ್ರಯತ್ನಪಟ್ಟರೂ ಅದು ಸ್ವಸ್ಥವಾಗಲಿಲ್ಲ; ಬಾಬೆಲನ್ನು ಬಿಟ್ಟು ನಾವೆಲ್ಲರೂ ನಮ್ಮ ನಮ್ಮ ದೇಶಗಳಿಗೆ ಹೋಗೋಣ; ಅದು ಹೊಂದಬೇಕಾದ ದಂಡನೆಯು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿದೆ, ಹೌದು, ಗಗನದವರೆಗೂ ಬೆಳೆದಿದೆ.
Kannada Bible (KNCL) BSI 2016
ಅಲ್ಲಿರುವ ಹೊರನಾಡಿಗರು, ‘ಬಾಬಿಲೋನನ್ನು ಸ್ವಸ್ಥಮಾಡಲು ನಾವು ಪ್ರಯತ್ನಿಸಿದೆವು. ಆದರೆ ಅದು ಸ್ವಸ್ಥವಾಗಲಿಲ್ಲ. ಬಾಬಿಲೋನನ್ನು ಬಿಟ್ಟು ನಾವೆಲ್ಲರು ನಮ್ಮ ನಮ್ಮ ನಾಡುಗಳಿಗೆ ಹೋಗೋಣ. ಅದು ಪಡೆಯಬೇಕಾದ ದಂಡನೆ ಆಕಾಶ ಮುಟ್ಟುವಷ್ಟು ದೊಡ್ಡದು, ಹೌದು, ಅದು ಗಗನದವರೆಗೂ ಬೆಳೆದಿದೆ,” ಎನ್ನುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ನಾವು ಬಾಬಿಲೋನನ್ನು ವಾಸಿಮಾಡಲು ಪ್ರಯತ್ನಿಸಿದೆವು; ಆದರೆ ಅದು ವಾಸಿಯಾಗಲಿಲ್ಲ; ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; ಆಕಾಶಗಳವರೆಗೂ ಏರುತ್ತದೆ.’