Jeremiah 52:15 — Compare Translations

5 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸೇನಾಊಪತಿಯಾದ ನೆಘೂಜರದಾನನು ಜೆರುಸಲೇಮಿನಲ್ಲಿ ಇನ್ನೂ ಉಳಿದುಕೊಂಡಿದ್ದ ಜನರನ್ನು ಬಂಧಿಗಳನ್ನಾಗಿ ಮಾಡಿಕೊಂಡನು. ಈ ಮುಂಚೆ ಬಾಬಿಲೋನಿನ ರಾಜನಿಗೆ ಶರಣಾಗತರಾದವರನ್ನು ಸಹ ಅವನು ತೆಗೆದುಕೊಂಡು ಹೋದನು. ಜೆರುಸಲೇಮಿನಲ್ಲಿ ಉಳಿದ ಕುಶಲಕರ್ಮಿಗಳನ್ನು ಸಹ ಅವನು ತೆಗೆದುಕೊಂಡು ಹೋದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಕೇವಲ ದಿಕ್ಕಿಲ್ಲದವರಲ್ಲಿ ಅನೇಕರನ್ನೂ, ಪಟ್ಟಣದಲ್ಲಿ ಉಳಿದವರನ್ನೂ, ಮೊದಲೇ ಬಾಬೆಲಿನ ಅರಸನ ಮೊರೆಹೊಕ್ಕವರನ್ನೂ ಮತ್ತು ಬೇರೆ ಎಲ್ಲಾ ಜನರನ್ನೂ ಸೆರೆಯೊಯ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಕೇವಲ ದರಿದ್ರರಲ್ಲಿ ಅನೇಕರನ್ನೂ ಪಟ್ಟಣದಲ್ಲಿ ಉಳಿದವರನ್ನೂ ಮೊದಲೇ ಬಾಬೆಲಿನ ಅರಸನ ಮರೆಹೊಕ್ಕವರನ್ನೂ ಬೇರೆ ಎಲ್ಲಾ ಜನರನ್ನೂ ಸೆರೆಯೊಯ್ದನು.
Kannada Bible (KNCL) BSI 2016
ರಕ್ಷಾದಳದ ಅಧಿಪತಿಯಾದ ನೆಬೂಜರದಾನನು ಅನೇಕ ದಟ್ಟ ದರಿದ್ರರನ್ನೂ ನಗರದಲ್ಲೆ ಉಳಿದವರನ್ನೂ ಮೊದಲೇ ಬಾಬಿಲೋನಿನ ಅರಸನಿಗೆ ಮೊರೆಹೊಕ್ಕವರನ್ನೂ ಹಾಗು ಬೇರೆ ಜನರೆಲ್ಲರನ್ನು ಸೆರೆಗೆ ಒಯ್ದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವರಾದ ಕೆಲವರನ್ನೂ, ಪಟ್ಟಣದಲ್ಲಿ ಉಳಿದ ಜನರನ್ನೂ, ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನೂ, ಬೇರೆ ಎಲ್ಲಾ ಜನರನ್ನೂ ಸೆರೆಯಾಗಿ ಒಯ್ದನು.