Jeremiah 6:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಜೆರುಸಲೇಮಿನ ಮೇಲೆ ಧಾಳಿ ಮಾಡುವದಕ್ಕೆ ಸಿದ್ಧರಾಗಿರಿ. ಏಳಿರಿ, ನಾವು ನಗರವನ್ನು ಮಧ್ಯಾಹಐದಲ್ಲಿಯೇ ಮುತ್ತೋಣ. ಆದರೆ ಈಗಾಗಲೇ ಹೊತ್ತಾಗಿದೆ. ಸಾಯಂಕಾಲದ ನೆರಳುಗಳು ವಿಸ್ತಾರಗೊಳ್ಳುತ್ತಿವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇವರು, ಚೀಯೋನಿಗೆ ವಿರುದ್ಧವಾಗಿ ಸನ್ನದ್ಧರಾಗಿರಿ, ಏಳಿರಿ, ಮಧ್ಯಾಹ್ನಕ್ಕೆ ಅದರ ಮೇಲೆ ನುಗ್ಗುವ! ಅಯ್ಯೋ, ಇದೇನು! ನಮಗೆ ಹೊತ್ತು ತಿರುಗಿತಲ್ಲಾ, ಸಂಜೆಯ ನೆರಳುಗಳು ಉದ್ದವಾದವು ಅನ್ನುವರು.
Kannada BSI Bible 2016
ಇವುಗಳೇ ಕರ್ತನ ಆಲಯ, ಕರ್ತನ ಆಲಯ, ಕರ್ತನ ಆಲಯ ಎಂದು ಹೇಳುವ ಸುಳ್ಳು ಮಾತುಗಳಲ್ಲಿ ನಂಬಿಕೆ ಇಡಬೇಡಿರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
[ಇವರು] - ಚೀಯೋನಿಗೆ ವಿರುದ್ಧವಾಗಿ ಸನ್ನದ್ಧರಾಗಿರಿ; ಏಳಿರಿ, ಮಧ್ಯಾಹ್ನಕ್ಕೆ ಅದರ ಮೇಲೆ ನುಗ್ಗುವ! ಅಯ್ಯೋ, ಇದೇನು! ನಮಗೆ ಹೊತ್ತು ತಿರುಗಿತಲ್ಲಾ, ಸಂಜೆಯ ನೆರಳುಗಳು ಉದ್ದವಾದವು.
Kannada Bible (KNCL) BSI 2016
ಅವರು: “ಸಿಯೋನಿಗೆ ವಿರುದ್ಧ ಯುದ್ಧಸನ್ನದ್ಧರಾಗಿರಿ. ಏಳಿ, ನಡುಮಧ್ಯಾಹ್ನದಲ್ಲೆ ಅದರ ಮೇಲೆ ನುಗ್ಗುವ. ಅಯ್ಯೋ, ಇದೇನು ಹೊತ್ತುಮೀರಿ ಹೋಗುತ್ತಿದೆ ಅಲ್ಲಾ, ಸಂಜೆಯ ನೆರಳು ಉದ್ದುದ್ದವಾಗುತ್ತಿದೆಯಲ್ಲಾ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಚೀಯೋನಿಗೆ ವಿರೋಧವಾಗಿ ಯುದ್ಧವನ್ನು ಸಿದ್ಧಮಾಡಿರಿ. ಏಳಿರಿ, ಮಧ್ಯಾಹ್ನದಲ್ಲಿ ದಾಳಿಮಾಡೋಣ. ನಮಗೆ ಕಷ್ಟ! ಏಕೆಂದರೆ ಹೊತ್ತು ಮುಳುಗುತ್ತದೆ; ಸಂಜೆಯ ನೆರಳುಗಳು ಉದ್ದವಾಗುತ್ತವೆ.