Jeremiah 6:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಜೆರುಸಲೇಮ್ ನಗರವೇ, ಈ ಎಚ್ಚರಿಕೆಯ ನುಡಿಗಳನ್ನು ಕೇಳು. ನೀನು ಕೇಳದಿದ್ದರೆ ನಾನು ನಿನಗೆ ವಿಮುಖನಾಗುವೆ. ನಾನು ನಿನ್ನ ಪ್ರದೇಶವನ್ನು ಒಂದು ಮರಳುಗಾಡಾಗಿ ಮಾಡುತ್ತೇನೆ. ಅಲ್ಲಿ ಯಾರೂ ವಾಸಮಾಡಲು ಸಾಧ್ಯವಾಗದು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆರೂಸಲೇಮೇ, ನಾನು ನಿನ್ನನ್ನು ಅಗಲಿ ನಾಶಪಡಿಸಿ ನಿರ್ಜನ ದೇಶವನ್ನಾಗಿ ಮಾಡದಂತೆ ರಕ್ಷಿಸಿಕೊಳ್ಳಲು ಶಿಕ್ಷಣವನ್ನು ಹೊಂದು ಎಂದು ಹೇಳಿದ್ದಾನೆ.
Kannada BSI Bible 2016
ಇಗೋ, ನೀವು ಪ್ರಯೋಜನವಿಲ್ಲದ ಸುಳ್ಳಾದ ಮಾತುಗಳಲ್ಲಿ ನಂಬಿಕೆ ಇಡುತ್ತೀರಿ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆರೂಸಲೇಮೇ, ನಾನು ನಿನ್ನನ್ನು ಅಗಲಿ ನಾಶಪಡಿಸಿ ನಿವಾಸಿಗಳಿಲ್ಲದ ದೇಶವನ್ನಾಗಿ ಮಾಡದಂತೆ ಶಿಕ್ಷಣವನ್ನು ಹೊಂದು.
Kannada Bible (KNCL) BSI 2016
ಜೆರುಸಲೇಮ್, ಎಚ್ಚರಿಕೆಯಿಂದ ನಡೆದುಕೊ. ಇಲ್ಲವಾದರೆ ನಾನು ನಿನ್ನನ್ನು ಅಗಲಿಬಿಡುವೆನು. ನಿನ್ನನ್ನು ಪಾಳುಬಿದ್ದ ನಿರ್ಜನ ಪ್ರದೇಶವಾಗಿಸುವೆನು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಓ ಯೆರೂಸಲೇಮೇ, ನನ್ನ ಪ್ರಾಣವು ನಿನ್ನ ಕಡೆಯಿಂದ ಹೊರಟು ಹೋಗದ ಹಾಗೆ, ನಾನು ನಿಮ್ಮನ್ನು ಹಾಳಾಗಿಯೂ, ನಿವಾಸಿಗಳಿಲ್ಲದ ದೇಶವಾಗಿಯೂ ಮಾಡದ ಹಾಗೆ ಶಿಕ್ಷಣವನ್ನು ತೆಗೆದುಕೋ.”