Jeremiah 7:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಯೆಹೂದದ ಜನರಾದ ನೀವು ಈಗ ಶೀಲೋವಿಗೆ ಹೋಗಿರಿ. ನಾನು ಮೊದಲು ನನ್ನ ಹೆಸರಿಗಾಗಿ ಆಲಯವನ್ನು ಮಾಡಿದ ಸ್ಥಳಕ್ಕೆ ಹೋಗಿರಿ. ಇಸ್ರೇಲಿನ ಜನರು ಸಹ ದುಷ್ಕೃತ್ಯಗಳನ್ನು ಮಾಡಿದರು. ಅವರು ಮಾಡಿದ ದುಷ್ಕೃತ್ಯಗಳ ಕಾರಣ ನಾನು ಆ ಸ್ಥಳಕ್ಕೆ ಮಾಡಿರುವುದನ್ನು ಹೋಗಿ ನೋಡಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನಾನು ಮೊದಲು ನನ್ನ ನಾಮವನ್ನು ಸ್ಥಾಪಿಸಿದ ಶೀಲೋವಿನಲ್ಲಿನ ನನ್ನ ಸ್ಥಾನಕ್ಕೆ ನೀವು ಹೋಗಿ ನನ್ನ ಜನರಾದ ಇಸ್ರಾಯೇಲರ ಅಧರ್ಮದ ನಿಮಿತ್ತ ಅದಕ್ಕೆ ತಂದ ಗತಿಯನ್ನು ನೋಡಿರಿ.
Kannada BSI Bible 2016
ಇಲ್ಲ, ಸ್ವಲ್ಪ ವಾದರೂ ನಾಚಿಕೆಪಡಲಿಲ್ಲ; ಇಲ್ಲವೆ ಅವರು ಲಜ್ಜೆ ಯನ್ನು ಅರಿಯರು. ಆದದರಿಂದ ಬೀಳುವವರೊಳಗೆ ಅವರು ಬೀಳುವರು; ಅವರು ವಿಚಾರಿಸಲ್ಪಡುವ ಕಾಲದಲ್ಲಿ ಕೆಳಗೆ ಹಾಕಲ್ಪಡು ವರು ಎಂದು ಕರ್ತನು ಹೇಳುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಮೊದಲು ನನ್ನ ನಾಮವನ್ನು ಸ್ಥಾಪಿಸಿದ ಶೀಲೋವಿನಲ್ಲಿನ ನನ್ನ ಸ್ಥಾನಕ್ಕೆ ನೀವು ಹೋಗಿ ನನ್ನ ಜನರಾದ ಇಸ್ರಾಯೇಲ್ಯರ ಅಧರ್ಮದ ನಿವಿುತ್ತ ನಾನು ಅದಕ್ಕೆ ತಂದ ಗತಿಯನ್ನು ನೋಡಿರಿ.
Kannada Bible (KNCL) BSI 2016
ನಾನು ನನ್ನ ನಾಮವನ್ನು ಮೊದಲು ಪ್ರತಿಷ್ಠಾಪಿಸಿದ ‘ಶಿಲೊ’ ಎಂಬ ಸ್ಥಾನಕ್ಕೆ ಹೋಗಿ ನೋಡಿ. ನನ್ನ ಜನ ಇಸ್ರಯೇಲರ ಅಧರ್ಮದ ನಿಮಿತ್ತ ಆ ಸ್ಥಳಕ್ಕೆ ತಂದ ಗತಿಯನ್ನು ಹೋಗಿ ನೋಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ ‘ಆದರೆ ಈಗ ಶೀಲೋವಿನಲ್ಲಿದ್ದ ನನ್ನ ಸ್ಥಳಕ್ಕೆ ಎಂದರೆ, ನಾನು ಮೊದಲು ನನ್ನ ಹೆಸರನ್ನು ಸ್ಥಾಪಿಸಿದ ಸ್ಥಳಕ್ಕೆ ಹೋಗಿರಿ; ಅದಕ್ಕೆ ನಾನು, ನನ್ನ ಜನರಾದ ಇಸ್ರಾಯೇಲರ ಕೆಟ್ಟತನದ ನಿಮಿತ್ತ ಏನು ಮಾಡಿದೆನೆಂದು ನೋಡಿರಿ.