Jeremiah 8:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆ ‘ಜ್ಞಾನಿಗಳು’ ಯೆಹೋವನ ಉಪದೇಶವನ್ನು ಕೇಳಲು ಒಪ್ಪಲಿಲ್ಲ. ಆದ್ದರಿಂದ ಅವರು ನಿಜವಾದ ಜ್ಞಾನಿಗಳಲ್ಲವೇ ಅಲ್ಲ. ಆ ‘ಜ್ಞಾನಿಗಳು’ ಸಿಕ್ಕಿಹಾಕಿಕೊಂಡಿದ್ದಾರೆ. ಅವರು ಗಾಬರಿಪಟ್ಟಿದ್ದಾರೆ ಮತ್ತು ನಾಚಿಕೆಪಟ್ಟಿದ್ದಾರೆ. ಅವರ ಜ್ಞಾನವು ಅಪ್ರಯೋಜಕವಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜ್ಞಾನಿಗಳು ಆಶಾಭಂಗಪಟ್ಟು ಬೆಚ್ಚಿಬಿದ್ದು ಸಿಕ್ಕಿಕೊಂಡಿದ್ದಾರೆ. ಇಗೋ, ಯೆಹೋವನ ಮಾತನ್ನು ನಿರಾಕರಿಸಿದರು.
Kannada BSI Bible 2016
ಇವು ಗಳ ನಿಮಿತ್ತ ನಾನು ಅವರನ್ನು ವಿಚಾರಿಸುವದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಜ್ಞಾನಿಗಳು ಆಶಾಭಂಗಪಟ್ಟು ಬೆಬ್ಬರಬಿದ್ದು ಸಿಕ್ಕಿಕೊಂಡಿದ್ದಾರೆ; ಇಗೋ, ಯೆಹೋವನ ಮಾತನ್ನು ನಿರಾಕರಿಸಿದರು;
Kannada Bible (KNCL) BSI 2016
ಜ್ಞಾನಿಗಳು ನಾಚಿಕೆಪಡುವರು, ನಿಬ್ಬೆರಗಾಗಿ ಬೋನಿಗೆ ಸಿಕ್ಕಿಬೀಳುವರು. ಏಕೆಂದರೆ ಸರ್ವೇಶ್ವರನಾದ ನನ್ನ ಮಾತನ್ನು ಅವರು ನಿರಾಕರಿಸಿದ್ದಾರೆ. ಇದು ತಾನೋ ಅವರ ಜ್ಞಾನ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಜ್ಞಾನಿಗಳು ನಾಚಿಕೊಂಡಿದ್ದಾರೆ. ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ. ಇಗೋ, ಯೆಹೋವ ದೇವರ ವಾಕ್ಯವನ್ನು ನಿರಾಕರಿಸಿದ್ದಾರೆ. ಹಾಗಾದರೆ ಅವರಲ್ಲಿ ಯಾವ ಜ್ಞಾನವಿದೆ.