Jeremiah 9:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ನಾನು (ಯೆಹೋವನು) ಜೆರುಸಲೇಮ್ ನಗರವನ್ನು ಕಸದ ರಾಶಿಯನ್ನಾಗಿ ಮಾಡುವೆನು. ಅದು ನರಿಗಳ ನಿವಾಸವಾಗುವದು. ನಾನು ಯೆಹೂದ ಪ್ರಾಂತದ ನಗರಗಳನ್ನು ನಾಶಮಾಡುವೆನು. ಅಲ್ಲಿ ಒಬ್ಬರೂ ವಾಸಮಾಡಲಾರರು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಯೆರೂಸಲೇಮನ್ನು ಹಾಳು ದಿಬ್ಬವನ್ನಾಗಿಯೂ, ನರಿಗಳ ಹಕ್ಕೆಯನ್ನಾಗಿಯೂ ಮಾಡುವೆನು ಮತ್ತು ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂಮಿಯನ್ನಾಗಿ ಮಾಡುವೆನು” ಎಂದು ಯೆಹೋವನು ಹೇಳಿದ್ದಾನಲ್ಲಾ.
Kannada BSI Bible 2016
ನೀವು ಅವರಿಗೆ ಹೀಗೆ ಹೇಳಬೇಕು--ಆಕಾಶ ಗಳನ್ನೂ ಭೂಮಿಯನ್ನೂ ಸೃಷ್ಟಿಸದ ದೇವರುಗಳು ಭೂಮಿಯ ಮೇಲಿನಿಂದಲೂ ಈ ಆಕಾಶಗಳ ಕೆಳಗಿ ನಿಂದಲೂ ನಾಶವಾಗುವವು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಯೆರೂಸಲೇಮನ್ನು ಹಾಳುದಿಬ್ಬಗಳನ್ನಾಗಿಯೂ ನರಿಗಳ ಹಕ್ಕೆಯನ್ನಾಗಿಯೂ ಗೈದು ಯೆಹೂದದ ಪಟ್ಟಣಗಳನ್ನು ಜನವಿಲ್ಲದ ಬೀಳುಭೂವಿುಯನ್ನಾಗಿ ಮಾಡುವೆನು [ಎಂದು ಯೆಹೋವನು ಹೇಳಿದ್ದಾನಲ್ಲಾ].
Kannada Bible (KNCL) BSI 2016
ಸರ್ವೇಶ್ವರ: “ಹಾಳು ದಿಬ್ಬಗಳನ್ನಾಗಿಸುವೆನು ಜೆರುಸಲೇಮನ್ನು ನರಿಗಳ ಹಕ್ಕೆಯನ್ನಾಗಿಸುವೆನು ಜುದೇಯ ಪಟ್ಟಣಗಳನ್ನು ಜನರಿಲ್ಲದ ಬೀಳುಭೂಮಿಯನ್ನಾಗಿಸುವೆನು ಅವುಗಳನ್ನು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆರೂಸಲೇಮನ್ನು ದಿಬ್ಬಗಳಾಗಿಯೂ, ನರಿಗಳ ಸ್ಥಾನವಾಗಿಯೂ ಮಾಡುತ್ತೇನೆ. ಯೆಹೂದದ ಪಟ್ಟಣಗಳನ್ನು ನಿವಾಸವಿಲ್ಲದೆ ಹಾಳು ಮಾಡುತ್ತೇನೆ.