Jeremiah 9:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಚೀಯೋನಿನಿಂದ ಮಹಾ ಗೋಳಾಟವು ಕೇಳಿಸುತ್ತಿದೆ: ‘ನಿಜವಾಗಿಯೂ ನಾವು ಹಾಳಾಗಿಹೋದೆವು. ನಿಜವಾಗಿಯೂ ನಾವು ನಾಚಿಕೆಪಡುವಂತಾಗಿದೆ. ನಾವು ನಮ್ಮ ನಾಡನ್ನು ಬಿಡಙೇಕು, ಏಕೆಂದರೆ ನಮ್ಮ ಮನೆಗಳನ್ನು ನಾಶಪಡಿಸಲಾಗಿದೆ.”‘
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
‘ಅಯ್ಯೋ, ಹಾಳಾದೆವು, ಭಂಗಪಟ್ಟೆವು; ನಾವು ನಮ್ಮ ದೇಶವನ್ನು ಬಿಟ್ಟೆವಲ್ಲಾ, ಶತ್ರುಗಳು ನಮ್ಮ ಮನೆಗಳನ್ನು ಕೆಡವಿದ್ದಾರಲ್ಲಾ’” ಎಂಬ ಪ್ರಲಾಪಧ್ವನಿಯು ಚೀಯೋನಿನೊಳಗಿಂದ ಕೇಳಿಸುತ್ತದೆ.
Kannada BSI Bible 2016
ನನ್ನ ನೋವಿನ ನಿಮಿತ್ತ ನನಗೆ ಅಯ್ಯೋ, ನನ್ನ ಗಾಯವು ಕಠಿಣವಾಗಿದೆ; ಆದರೆ ನಾನು--ನಿಶ್ಚಯ ವಾಗಿ ಇದು ಸಂತಾಪವಾಗಿದೆ; ನಾನು ತಾಳಲೇಬೇಕು ಅಂದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಯ್ಯೋ, ಹಾಳಾದೆವು, ಭಂಗಪಟ್ಟೆವು; ನಾವು ನಮ್ಮ ದೇಶವನ್ನು ಬಿಟ್ಟೆವಲ್ಲಾ, [ಶತ್ರುಗಳು] ನಮ್ಮ ಮನೆಗಳನ್ನು ಕೆಡವಿದ್ದಾರಲ್ಲಾ ಎಂಬ ಪ್ರಲಾಪಧ್ವನಿಯು ಚೀಯೋನಿನೊಳಗಿಂದ ಕೇಳಿಸುತ್ತದೆ.
Kannada Bible (KNCL) BSI 2016
ಸಿಯೋನಿನಿಂದ ಕೇಳಿಬಂದ ಪ್ರಲಾಪನೆ: “ಅಯ್ಯೋ ಹಾಳಾದೆವು, ನಮ್ಮ ಮಾನಮರ್ಯಾದೆ ಕಳೆದುಹೋಯಿತು! ನಾವು ನಮ್ಮ ನಾಡನ್ನೇ ಬಿಟ್ಟು ತೊಲಗಬೇಕಾಗಿ ಬಂದಿತು. (ಶತ್ರುಗಳಿಂದ) ನಮ್ಮ ಮನೆಮಠಗಳು ನೆಲಸಮವಾದವು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
‘ನಾವು ಹೇಗೆ ಹಾಳಾದೆವು, ನಾವು ದೇಶವನ್ನು ಬಿಟ್ಟದ್ದರಿಂದಲೂ, ನಮ್ಮ ನಿವಾಸಗಳು ನಮ್ಮನ್ನು ಹೊರಗೆ ಹಾಕಿದ್ದರಿಂದಲೂ ಬಹಳವಾಗಿ ನಾಚಿಕೆ ಪಡುತ್ತೇವೆ, ಎಂಬ ಗೋಳಾಟದ ಶಬ್ದವು ಚೀಯೋನಿನಿಂದ ಕೇಳಿಬಂತು.’ ”