Job 1:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಗ ಇದ್ದಕ್ಕಿದಂತೆ ಮರುಭೂಮಿಯಿಂದ ಬಿರುಗಾಳಿ ಬೀಸಿದ್ದರಿಂದ ಮನೆಯು ನಿನ್ನ ಗಂಡು ಹೆಣ್ಣುಮಕ್ಕಳ ಮೇಲೆ ಕುಸಿದು ಬಿದ್ದಿತು; ಅವರೆಲ್ಲಾ ಸತ್ತುಹೋದರು. ನಾನೊಬ್ಬನು ಮಾತ್ರ ತಪ್ಪಿಸಿಕೊಂಡೆನು! ಇದನ್ನು ನಿನಗೆ ತಿಳಿಸುವುದಕ್ಕಾಗಿಯೇ ಬಂದೆನು” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅರಣ್ಯದ ಕಡೆಯಿಂದ ಬಿರುಗಾಳಿಯು ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿದು, ಮನೆಯು ಯೌವನಸ್ಥರ ಮೇಲೆ ಬಿದ್ದಿತು. ಅವರೆಲ್ಲರು ಸತ್ತು ಹೋದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.
Kannada BSI Bible 2016
ಅಗೋ, ದೊಡ್ಡ ಗಾಳಿ ಬಂದು ಮನೆಯ ನಾಲ್ಕು ಮೂಲೆಗಳಿಗೆ ಹೊಡೆದದ್ದರಿಂದ ಅದು ಯೌವನಸ್ಥರ ಮೇಲೆ ಬಿತ್ತು; ಅವರು ಸತ್ತರು; ನಾನೊಬ್ಬನು ಮಾತ್ರ ನಿನಗೆ ತಿಳಿಸುವುದಕ್ಕೆ ತಪ್ಪಿಸಿಕೊಂಡೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ ಅರಣ್ಯದ ಕಡೆಯಿಂದ ಬಿರುಗಾಳಿಯು ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿಯಿತು; ಮನೆಯು ಯೌವನಸ್ಥರ ಮೇಲೆ ಬಿದ್ದಿತು; ಸತ್ತು ಹೋದರು; ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ ಅಂದನು.
Kannada Bible (KNCL) BSI 2016
ಆಗ ತಟ್ಟನೆ ಅರಣ್ಯ ಕಡೆಯಿಂದ ಬಿರುಗಾಳಿ ಎದ್ದಿತು; ನಾಲ್ಕು ಕಡೆಯಿಂದಲೂ ಮನೆಗೆ ಬಡಿಯಿತು. ಮನೆ ಕುಸಿದುಬಿತ್ತು. ಯುವಕಯುವತಿಯರೆಲ್ಲ ಸತ್ತುಹೋದರು. ನಾನೊಬ್ಬನೇ ತಲೆತಪ್ಪಿಸಿಕೊಂಡು ಈ ಸುದ್ದಿಯನ್ನು ನಿಮಗೆ ತಂದಿದ್ದೇನೆ,” ಎಂದು ತಿಳಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದ್ದಕ್ಕಿದ್ದಂತೆ ಮರುಭೂಮಿ ಕಡೆಯಿಂದ ದೊಡ್ಡ ಗಾಳಿ ಬೀಸಿ, ಮನೆಯ ನಾಲ್ಕು ಮೂಲೆಗಳಿಗೆ ಬಡಿಯಿತು. ಮನೆಯು ಯೌವನಸ್ಥರ ಮೇಲೆ ಬಿತ್ತು, ಅವರು ಸತ್ತುಹೋದರು. ನಾನೊಬ್ಬನು ಮಾತ್ರ, ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ,” ಎಂದನು.