Job 10:22 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಸ್ಥಳವು ಕತ್ತಲೆಯಿಂದಲೂ ಮರಣಾಂಧಕಾರದಿಂದಲೂ ಗಲಿಬಿಲಿಯಿಂದಲೂ ಕೂಡಿದೆ. ಅಲ್ಲಿನ ಬೆಳಕು ಸಹ ಕತ್ತಲೆಯೇ!”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರಾತ್ರಿಗೂ, ಮರಣಾಂಧಕಾರಕ್ಕೂ ಸಮಾನವಾದ, ಕಗ್ಗತ್ತಲು ಅದನ್ನು ಆವರಿಸಿದೆ, ಅಲ್ಲಿ ಏನೂ ಕ್ರಮವಿಲ್ಲ, ಅದರ ಬೆಳಕು ರಾತ್ರಿಯ ಬೆಳಕಿನಂತೆ.”
Kannada BSI Bible 2016
ಮರಣದ ನೆರಳಿನ ಅಂಧಕಾರದ ಹಾಗೆ ಮೊಬ್ಬಿರುವ ಕ್ರಮವಿಲ್ಲದ ಪ್ರಕಾಶವೇ ಅಂಧ ಕಾರದ ಹಾಗಿರುವ ದೇಶಕ್ಕೆ ಹೋಗುವದಕ್ಕಿಂತ ಮುಂಚೆ ಸ್ವಲ್ಪ ವಿಶ್ರಮಿಸಿಕೊಳ್ಳುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ರಾತ್ರಿಗೂ ಮರಣಾಂಧಕಾರಕ್ಕೂ ಸಮಾನವಾದ ಕಗ್ಗತ್ತಲು ಅದನ್ನು ಆವರಿಸಿದೆ, ಅಲ್ಲಿ ಏನೂ ಕ್ರಮವಿಲ್ಲ, ಅದರ ಬೆಳಕು ರಾತ್ರಿಯ ತಮಸ್ಸೇ.
Kannada Bible (KNCL) BSI 2016
ಕಾರ್ಗತ್ತಲೂ ಗಾಢಾಂಧಕಾರವೂ ಅಲ್ಲಿವೆ ಅರಾಜಕತೆಯೂ ಕಾರಿರುಳೂ ಅದನು ಆವರಿಸಿವೆ ಬೆಳಕೇ ಕಾರಿರುಳಾಗಿ ಆ ನಾಡನ್ನು ಕವಿದಿದೆ.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದೇಶದಲ್ಲಿ ಕಾರ್ಗತ್ತಲೂ, ಗಾಢಾಂಧಕಾರವೂ ಮರಣದ ತುಂಬಿರುವುದು. ಕ್ರಮವಿಲ್ಲದ ಆ ದೇಶದಲ್ಲಿ ಬೆಳಕೂ ಕತ್ತಲೆಯೇ.”