Job 12:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆಪತ್ತಿಗೆ ಗುರಿಯಾಗಿಲ್ಲದವರು ಆಪತ್ತಿನಿಂದ ಕಷ್ಟಪಡುತ್ತಿರುವ ಜನರನ್ನು ಗೇಲಿ ಮಾಡುವರು; ಜಾರಿಬಿದ್ದವನಿಗೆ ಹೊಡೆಯುವರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಪತ್ತನ್ನು ಅನುಭವಿಸುವವರು ತಿರಸ್ಕಾರಕ್ಕೆ ಯೋಗ್ಯರೆಂಬುದು ನೆಮ್ಮದಿಯಿಂದಿರುವವನ ಯೋಚನೆ; ಜಾರಿ ಬಿದ್ದವರಿಗೆ ಅಪಮಾನವು ಕಾದಿರುತ್ತದೆ.
Kannada BSI Bible 2016
ತನ್ನ ಕಾಲುಗ ಳಿಂದ ಜಾರುವದಕ್ಕೆ ಸಿದ್ಧನಾಗಿರುವವನು, ನೆಮ್ಮದಿಯಾ ಗಿರುವವನ ಯೋಚನೆಯಲ್ಲಿ ತಿರಸ್ಕಾರದ ದೀವಟಿ ಗೆಯಾಗಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಪತ್ತನ್ನು ಅನುಭವಿಸುವವರು ತಿರಸ್ಕಾರಕ್ಕೆ ಯೋಗ್ಯರೆಂಬದು ನೆಮ್ಮದಿಯಿಂದಿರುವವನ ಯೋಚನೆ;
Kannada Bible (KNCL) BSI 2016
ದಲಿತರನ್ನು ಕಂಡರೆ ಸುಖಜೀವಿಗಳಿಗೆ ತಾತ್ಸಾರ ಜಾರಿ ಬೀಳಲಿರುವವರಿಗೆ ಕಾದಿದೆ ತಿರಸ್ಕಾರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸುಖಜೀವಿಗಳಾಗಿರುವ ಜನರು ತೊಂದರೆಯಲ್ಲಿ ಇರುವವರನ್ನು ಅಪಹಾಸ್ಯ ಮಾಡುತ್ತಾರೆ, ಎಡವಿ ಬೀಳುವ ಜನರಿಗೆ ಕಾದಿದೆ ಆಪತ್ತು.