Job 14:7 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಮರಕ್ಕೆ ನಿರೀಕ್ಷೆಯಿದೆ. ಕಡಿದುಹಾಕಲ್ಪಟ್ಟರೂ ಅದು ಮತ್ತೆ ಚಿಗುರಬಹುದು; ಹೊಸ ಕವಲುಗಳನ್ನು ಮೊಳೆಯಿಸುತ್ತಲೇ ಇರುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಕಡಿದ ಮರವೂ, ತಾನು ಮೊಳೆಯುವುದನ್ನು ನಿಲ್ಲಿಸದೆ, ಮತ್ತೆ ಚಿಗುರುವೆನೆಂದು ನಿರೀಕ್ಷಿಸುತ್ತದಲ್ಲವೇ!
Kannada BSI Bible 2016
ಮರಕ್ಕೆ ನಿರೀಕ್ಷೆಯುಂಟು; ಅದು ಕೊಯ್ಯಲ್ಪಟ್ಟರೆ ಮತ್ತೆ ಚಿಗುರುವದು. ಚಿಗುರುವದನ್ನು ನಿಲ್ಲಿಸುವದೇ ಇಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಕಡಿದ ಮರವೂ ತಾನು ಮೊಳೆಯುವದನ್ನು ನಿಲ್ಲಿಸದೆ ಮತ್ತೆ ಚಿಗುರೇನೆಂದು ನಿರೀಕ್ಷಿಸುತ್ತದಲ್ಲವೇ!
Kannada Bible (KNCL) BSI 2016
ಮತ್ತೆ ಮೊಳೆಯುವೆನೆಂಬ, ಮರಳಿ ಚಿಗುರುವೆನೆಂಬ ನಂಬಿಕೆಯಿಂದಿದೆ ಅಲ್ಲವೆ ಕಡಿದ ವಟವೃಕ್ಷ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಮರಕ್ಕೆ ಸಹ ಒಂದು ನಿರೀಕ್ಷೆ ಇದೆ: ಅದೇನೆಂದರೆ, ಮರವನ್ನು ಕಡಿದು ಹಾಕಿದರೂ ತಾನು ಮತ್ತೆ ಚಿಗುರುವೆನೆಂಬ ನಿರೀಕ್ಷೆ ಅದಕ್ಕಿದೆ; ಚಿಗುರುವುದನ್ನು ಆ ಮರವು ನಿಲ್ಲಿಸುವುದೇ ಇಲ್ಲ.