Job 16:6 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಆದರೆ ನನ್ನ ಯಾವ ಮಾತೂ ನನ್ನ ನೋವನ್ನು ನಿವಾರಣೆ ಮಾಡಲಾರದು; ಮೌನವಾಗಿದ್ದರೂ ಅದರಿಂದ ಪ್ರಯೋಜನವೇನೂ ಇಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಮಾತನಾಡಿದರೂ, ನನ್ನ ಮನೋವ್ಯಥೆಯು ಶಾಂತವಾಗುವುದಿಲ್ಲ. ಸುಮ್ಮನಾದರೂ, ಕಷ್ಟ ನಿವಾರಣೆಯಾಗುವುದಿಲ್ಲ.
Kannada BSI Bible 2016
ನಾನು ಮಾತನಾಡಿದರೆ ನನ್ನ ನೋವಿಗೆ ಉಪಶಮನವಾಗುವದಿಲ್ಲ; ನಾನು ಬಿಟ್ಟರೆ ನನಗೆ ಏನು ಉಪಶಮನವಾದೀತು?
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಮಾತಾಡಿದರೂ ನನ್ನ ಮನೋವ್ಯಥೆಯು ಶಾಂತವಾಗುವದಿಲ್ಲ. ಸುಮ್ಮನಾದರೂ ಕಷ್ಟ ನಿವಾರಣೆಯಾಗುವದಿಲ್ಲ.
Kannada Bible (KNCL) BSI 2016
ನಾನು ಮಾತಾಡಿದರೆ ನನ್ನ ನೋವು ನಿವಾರಣೆಯಾಗದು ನಾನು ಸುಮ್ಮನಿದ್ದರೆ ನನ್ನ ಕಷ್ಟ ಪರಿಹಾರವಾಗದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಾನು ಮಾತನಾಡಿದರೂ ನನ್ನ ನೋವಿಗೆ ಉಪಶಮನವಾಗುವುದಿಲ್ಲ; ನಾನು ಮೌನವಾಗಿದ್ದರೂ, ನನ್ನ ನೋವು ನಿವಾರಣೆಯಾಗುವುದಿಲ್ಲ.