Job 16:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನೀನು ನನ್ನನ್ನು ಮುದುಡಿಹಾಕಿರುವುದು ಎಲ್ಲರಿಗೂ ಕಾಣುತ್ತಿದೆ. ನನ್ನ ದೇಹ ರೋಗಗ್ರಸ್ತವಾಗಿದೆ; ನಾನು ವಿಕಾರವಾಗಿ ಕಾಣುತ್ತಿರುವೆ. ಜನರು ನನ್ನನ್ನು ಅಪರಾಧಿಯೆಂದು ಭಾವಿಸಿಕೊಂಡಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ನನ್ನನ್ನು ಹಿಡಿದಿರುವುದು ನನಗೆ ಪ್ರತಿಸಾಕ್ಷಿಯಾಗಿದೆ, ನನ್ನ ಬಲಹೀನವು ನನ್ನ ವಿರುದ್ಧವಾಗಿ ನನ್ನ ಮುಖದ ಮುಂದೆ ಸಾಕ್ಷಿಕೊಡುತ್ತದೆ.
Kannada BSI Bible 2016
ನನ್ನನ್ನು ಸುಕ್ಕುಗಳಿಂದ ತುಂಬಿಸಿದ್ದೀ; ಅವು ನನಗೆ ವಿರೋಧವಾಗಿ ಸಾಕ್ಷಿಯಾದವು; ನನ್ನ ಬಡಕಲತನವು ನನ್ನಲ್ಲಿ ಎದ್ದು ನನ್ನ ಮುಖದ ಎದುರು ಸಾಕ್ಷಿಕೊಡುತ್ತವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ನನ್ನನ್ನು ಹಿಡಿದಿರುವದು ನನಗೆ ಪ್ರತಿಸಾಕ್ಷಿಯಾಗಿದೆ, ನನ್ನ ಕ್ಷೀಣತ್ವವು ನನಗೆ ವಿರುದ್ಧವಾಗಿ ಎದ್ದು ನನ್ನ ಮುಖದ ಮುಂದೆ ಸಾಕ್ಷಿಕೊಡುತ್ತದೆ.
Kannada Bible (KNCL) BSI 2016
ನನ್ನ ಮುಖವೆಲ್ಲ ಸುಕ್ಕುಹಿಡಿದಿದೆ ನನ್ನ ಸಣಕಲುತನವೆ ನನಗೆ ವಿರುದ್ಧ ಸಾಕ್ಷಿಯಾಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀವು ನನ್ನ ಮುಖವೆಲ್ಲಾ ಸುಕ್ಕುಗಳಿಂದ ತುಂಬಿಸಿದ್ದೀರಿ; ನನ್ನ ಬಿಕ್ಕಟ್ಟೇ ನನಗೆ ವಿರೋಧವಾಗಿ ಎದ್ದು ಸಾಕ್ಷಿ ಕೊಡುತ್ತವೆ;