Job 2:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮತ್ತೊಂದು ದಿನ ಯೆಹೋವನನ್ನು ಭೇಟಿಯಾಗಲು ದೇವದೂತರು ಬಂದರು. ಸೈತಾನನು ಸಹ ಯೆಹೋವನನ್ನು ಭೇಟಿಯಾಗಲು ಅವರೊಂದಿಗೆ ಬಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವದೂತರು ಇನ್ನೊಂದು ದಿನ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ಸೈತಾನನೂ ಅವರ ಸಂಗಡ ಬಂದು ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಂಡನು.
Kannada BSI Bible 2016
ತಿರಿಗಿ ಒಂದು ದಿನ ಕರ್ತನ ಬಳಿಯಲ್ಲಿ ನಿಂತುಕೊಳ್ಳುವದಕ್ಕೆ ದೇವರ ಪುತ್ರರು ಬಂದಾಗ ಸೈತಾನನು ಸಹ ಅವರ ಸಂಗಡ ಬಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವದೂತರು ಇನ್ನೊಂದು ದಿವಸ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವದಕ್ಕೆ ಬಂದಾಗ ಸೈತಾನನೂ ಅವರ ಸಂಗಡ ಬಂದು ಸನ್ನಿಧಿಯಲ್ಲಿ ಕಾಣಿಸಿಕೊಂಡನು.
Kannada Bible (KNCL) BSI 2016
ಸ್ವರ್ಗನಿವಾಸಿಗಳು ಇನ್ನೊಂದು ದಿನ ಸರ್ವೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಓಲಗಿಸಿದ್ದರು. ಸೈತಾನನು ಅವರ ಮಧ್ಯೆ ಕಾಣಿಸಿಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇನ್ನೊಂದು ದಿನ, ದೇವದೂತರು ಯೆಹೋವ ದೇವರ ಮುಂದೆ ಒಟ್ಟಾಗಿ ಸೇರಿ ಬಂದಿದ್ದರು. ಸೈತಾನನು ಸಹ ಅವರೊಂದಿಗೆ ಯೆಹೋವ ದೇವರ ಮುಂದೆ ಬಂದನು.