Job 2:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಆ ಮೂವರು ಸ್ನೇಹಿತರು ಬಹು ದೂರದಿಂದ ಯೋಬನನ್ನು ಕಂಡಾಗ ಅವನ ಗುರುತೇ ಹಿಡಿಯಲಾರದೆ ಗಟ್ಟಿಯಾಗಿ ಅಳತೊಡಗಿದರು; ತಮ್ಮ ಮೇಲಂಗಿಗಳನ್ನು ಹರಿದುಕೊಂಡು ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಗಳ ಮೇಲೆ ಸುರಿಸಿಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರು ದೂರದಿಂದ ಕಣ್ಣೆತ್ತಿ ನೋಡಿ ಯೋಬನ ಗುರುತನ್ನು ಹಿಡಿಯಲಾರದೆ ಹೋದ ಕಾರಣ ಗಟ್ಟಿಯಾಗಿ ಅತ್ತು ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಯ ಮೇಲೆ ಸುರಿದುಕೊಂಡರು.
Kannada BSI Bible 2016
ಅವರು ದೂರದಿಂದ ತಮ್ಮ ಕಣ್ಣುಗಳನ್ನು ಎತ್ತಿದಾಗ ಅವನ ಗುರುತು ತಿಳಿಯದೆ ತಮ್ಮ ಸ್ವರವನ್ನೆತ್ತಿ ಅತ್ತು, ತಮ್ಮ ತಮ್ಮ ನಿಲುವಂಗಿಗಳನ್ನು ಹರಿದು, ತಮ್ಮ ತಲೆಯ ಮೇಲೆ ಧೂಳನ್ನೂ ಆಕಾಶದ ಕಡೆಗೆ ತೂರಿದರು.ಅವರು ಅವನ ಸಂಗಡ ಏಳು ಹಗಲು ಏಳು ರಾತ್ರಿ ನೆಲದ ಮೇಲೆ ಕೂತುಕೊಂಡರು. ಒಬ್ಬನಾದರೂ ಒಂದು ಮಾತನ್ನೂ ಅವನಿಗೆ ಹೇಳಲಿಲ್ಲ; ಯಾಕಂದರೆ ಅವನ ದುಃಖವು ಬಹಳ ಅಧಿಕವೆಂದು ನೋಡಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರು ದೂರದಿಂದ ಕಣ್ಣೆತ್ತಿ ನೋಡಿ ಯೋಬನ ಗುರುತನ್ನು ಹಿಡಿಯಲಾರದೆ ಹೋದ ಕಾರಣ ಗಟ್ಟಿಯಾಗಿ ಅತ್ತು ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಯ ಮೇಲೆ ಸುರಿಸಿಕೊಂಡರು.
Kannada Bible (KNCL) BSI 2016
ದೂರದಿಂದ ನೋಡಿದಾಗ ಆತನ ಗುರುತುಹಚ್ಚಲು ಕೂಡ ಅವರಿಂದಾ ಆಗಲಿಲ್ಲ. ಎಂದೇ ಅವರು ಗಟ್ಟಿಯಾಗಿ ಅತ್ತರು. ದುಃಖ ತಾಳಲಾರದೆ ತಂತಮ್ಮ ಮೇಲಂಗಿಯನ್ನು ಸೀಳಿಕೊಂಡರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಯೋಬನನ್ನು ದೂರದಿಂದ ನೋಡಿದಾಗ, ಅವನನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅವರು ಗಟ್ಟಿಯಾಗಿ ಅಳಲು ಪ್ರಾರಂಭಿಸಿದರು. ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಧೂಳನ್ನು ತಮ್ಮ ತಲೆಯ ಮೇಲೆ ಸುರಿಸಿಕೊಂಡರು.