Job 2:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ನೀನು ಕೈಚಾಚಿ ಅವನ ಮಾಂಸವನ್ನೂ ಮೂಳೆಗಳನ್ನೂ ಹೊಡೆ. ಅವನು ನಿನ್ನ ಮುಖದೆದುರಿಗೆ ನಿನ್ನನ್ನು ಖಂಡಿತವಾಗಿ ದೂಷಿಸುವನು” ಎಂದು ಉತ್ತರಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ. ಆಗ ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸದೆ ಬಿಡುವುದಿಲ್ಲ” ಎಂದನು.
Kannada BSI Bible 2016
ಆದರೆ ನಿನ್ನ ಕೈಚಾಚಿ ಅವನ ಎಲುಬನ್ನೂ ಅವನ ಮಾಂಸವನ್ನೂ ಮುಟ್ಟಿದರೆ ಅವನು ನಿನ್ನ ಎದುರಿನಲ್ಲಿ ನಿನ್ನನ್ನು ಶಪಿಸುವನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ; ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು ಅಂದನು.
Kannada Bible (KNCL) BSI 2016
ನೀವೀಗ ಕೈಚಾಚಿ ಯೋಬನ ಮೂಳೆಮಾಂಸಗಳನ್ನು ಮುಟ್ಟಿನೋಡಿ; ಅವನು ನಿಮ್ಮ ಮುಖದೆದುರಿಗೇ ನಿಮ್ಮನ್ನು ದೂಷಿಸುತ್ತಾನೋ ಇಲ್ಲವೋ ನೀವೇ ನೋಡುವಿರಂತೆ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಈಗ ನಿಮ್ಮ ಕೈಚಾಚಿ, ಅವನ ಎಲುಬನ್ನೂ ಅವನ ಮಾಂಸವನ್ನೂ ಹೊಡೆದರೆ, ಅವನು ನಿಮ್ಮ ಮುಖದೆದುರಿಗೇ ನಿಮ್ಮನ್ನು ಶಪಿಸುವನು,” ಎಂದನು.