Job 27:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಪೂರ್ವದ ಗಾಳಿಯು ಅವನನ್ನು ಹೊತ್ತುಕೊಂಡು ಹೋಗುವುದರಿಂದ ಅವನು ಇಲ್ಲವಾಗುವನು. ಬಿರುಗಾಳಿಯು ಅವನನ್ನು ಮನೆಯೊಳಗಿಂದ ಹೊತ್ತುಕೊಂಡುಹೋಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೂಡಣ ಗಾಳಿಯು ಕೊಚ್ಚಿಕೊಂಡು ಹೋಗುವುದರಿಂದ ಅವನು ಹಾರಿ ಹೋಗುವನು, ಅದು ಅವನನ್ನು ಬಡಿದು ಅವನ ಸ್ಥಳದಿಂದ ದೂರಮಾಡುವುದು.
Kannada BSI Bible 2016
ಮೂಡಣಗಾಳಿ ಅವನನ್ನು ಎತ್ತಿಕೊಂಡು ಹೋಗು ತ್ತದೆ; ಅವನು ಹೋಗಿಬಿಡುತ್ತಾನೆ; ಬಿರುಗಾಳಿ ಅವನನ್ನು ಅವನ ಸ್ಥಳದಿಂದ ಹಾರಿಸಿ ಬಿಡುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೂಡಣ ಗಾಳಿಯು ಕೊಚ್ಚುವದರಿಂದ ಅವನು ಹೋಗೇ ಹೋಗುವನು, ಅದು ಅವನನ್ನು ಬಡಿದು ಅವನ ಸ್ಥಳದೊಳಗಿಂದ ಹಾರಿಸಿಬಿಡುವದು.
Kannada Bible (KNCL) BSI 2016
ಅವನು ತೂರಿಹೋಗದಿರನು ಮೂಡಣಗಾಳಿ ಬಡಿಯುವುದರಿಂದ ಅವನನ್ನು ಹೊಡೆದು ಹಾರಿಸಿಬಿಡುವುದು ಅವನಿರುವ ಜಾಗದಿಂದ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಪೂರ್ವದಿಕ್ಕಿನ ಗಾಳಿ ದುಷ್ಟರನ್ನು ಬಡಿಯಲು, ಅವರು ಕೊಚ್ಚಿಕೊಂಡು ಹೋಗುವರು; ಅದು ಅವರನ್ನು ಅವರ ಸ್ಥಳದಿಂದ ಹಾರಿಸಿಬಿಡುವುದು.