Job 28:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಜ್ಞಾನವು ನನ್ನೊಂದಿಗಿಲ್ಲ’ ಎಂದು ಆಳವಾದ ಸಾಗರವು ಹೇಳುತ್ತದೆ. ‘ಜ್ಞಾನವು ನನ್ನೊಂದಿಗಿಲ್ಲ’ ಎಂದು ಸಮುದ್ರವು ಹೇಳುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಭೂಮಿಯ ಕೆಳಗಣ ಸಾಗರವು ನನ್ನಲ್ಲಿ ಇಲ್ಲ ಎನ್ನುವುದು, ಸಮುದ್ರವು, ತನ್ನ ಹತ್ತಿರ ಇಲ್ಲ ಎಂದು ಹೇಳುವುದು.
Kannada BSI Bible 2016
ಅಗಾಧವು--ಅದು ನನ್ನಲ್ಲಿ ಇಲ್ಲ ಅನ್ನುತ್ತದೆ; ಸಮುದ್ರವು--ನನ್ನ ಬಳಿಯಲ್ಲಿ ಇಲ್ಲ ಅನ್ನು ತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಭೂವಿುಯ ಕೆಳಗಣ ಸಾಗರವು - ನನ್ನಲ್ಲಿಲ್ಲ ಎನ್ನುವದು, ಸಮುದ್ರವು - ತನ್ನ ಹತ್ತಿರ ಸಿಕ್ಕದೆಂದು ಹೇಳುವದು.
Kannada Bible (KNCL) BSI 2016
‘ಅದು ನನ್ನಲ್ಲಿಲ್ಲ’ ಎನ್ನುತ್ತದೆ ಪಾತಾಳ ‘ನನ್ನ ಬಳಿಯಲ್ಲಿಲ್ಲ’ ಎನ್ನುತ್ತದೆ ಸಮುದ್ರ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಸಾಗರ, “ಜ್ಞಾನವು ನನ್ನ ಹತ್ತಿರ ಇಲ್ಲ,” ಎನ್ನುತ್ತದೆ; ಸಮುದ್ರವು, “ಜ್ಞಾನವು ನನ್ನ ಬಳಿಯಲ್ಲಿ ಇಲ್ಲ,” ಎನ್ನುತ್ತದೆ.