Job 30:12 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅವರು ನನ್ನ ಬಲಗಡೆಯಲ್ಲಿ ಎದ್ದು ನನ್ನ ಕಾಲುಗಳನ್ನು ಹಿಂದಕ್ಕೆ ನೂಕಿ ನನ್ನನ್ನು ನಾಶಮಾಡಲು ದಿಬ್ಬಹಾಕಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಕಲಹಗಾರರು ನನ್ನ ಬಲಗಡೆ ಎದ್ದು, ನನ್ನ ಕಾಲುಗಳನ್ನು ಹಿಂದಕ್ಕೆ ತಳ್ಳುತ್ತಾ ನನ್ನ ನಾಶಕ್ಕಾಗಿ ಹೊಂಚು ಹಾಕಿದ್ದಾರೆ.
Kannada BSI Bible 2016
ಬಲಗಡೆಯಲ್ಲಿ ಯುವಕರು ಏಳುತ್ತಾರೆ; ಅವರು ನನ್ನ ಕಾಲುಗಳನ್ನು ದೂಡುತ್ತಾರೆ; ನಾಶಕರ ವಾದ ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ದುರ್ಜಾತಿಯವರು ನನ್ನ ಬಲಗಡೆ ಎದ್ದು ನನ್ನ ಕಾಲುಗಳನ್ನು ಹಿಂದಕ್ಕೆ ನೂಕುತ್ತಾ ನನ್ನ ನಾಶನಕ್ಕಾಗಿ ದಿಬ್ಬಹಾಕಿದ್ದಾರೆ.
Kannada Bible (KNCL) BSI 2016
ಕಲಹಗಾರರು ಎದ್ದಿದ್ದಾರೆ ನನ್ನ ಬಲಗಡೆಗೆ ನನ್ನ ಕಾಲುಗಳನು ನೂಕುತ್ತಿದ್ದರೆ ಹಿಂದಕೆ ಸಂಚುಹೂಡುತ್ತಿದ್ದಾರೆ ನನ್ನನ್ನು ನಾಶಮಾಡಲಿಕೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಲಗಡೆಯಲ್ಲಿ ಯುವಕರು ಎದ್ದಿದ್ದಾರೆ; ಅವರು ನನ್ನ ಕಾಲುಗಳಿಗೆ ಬಲೆ ಹಾಕಿದ್ದಾರೆ. ನನ್ನನ್ನು ನಾಶಮಾಡಲು ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಿದ್ದಾರೆ.