Job 34:29 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ದೇವರು ಬಡಜನರಿಗೆ ಸಹಾಯಮಾಡದಿರಲು ನಿರ್ಧರಿಸಿದರೆ, ಆತನನ್ನು ದೋಷಿಯೆಂದು ತೀರ್ಪುಮಾಡುವವನು ಯಾರು? ದೇವರು ತನ್ನ ಮುಖವನ್ನು ಅವರಿಗೆ ಮರೆಮಾಡಿಕೊಂಡರೆ ಆತನನ್ನು ನೋಡಬಲ್ಲವರು ಯಾರು? ಮನುಷ್ಯರನ್ನೂ ಜನಾಂಗಗಳನ್ನೂ ಆಳುವವನು ದೇವರೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆತನು ನೆಮ್ಮದಿಯನ್ನು ದಯಪಾಲಿಸಿದರೆ ತಪ್ಪುಹೊರಿಸುವವರು ಯಾರು? ವಿಮುಖನಾದರೆ ಆತನ ದರ್ಶನ ಮಾಡುವವರಾರು? ಆತನು ಜನಾಂಗಕ್ಕಾಗಲಿ, ಮನುಷ್ಯನಿಗಾಗಲಿ ಮಾಡುವುದೆಲ್ಲಾ ಹೀಗೆಯೇ.
Kannada BSI Bible 2016
ಆತನು ಶಾಂತ ಮಾಡಿದರೆ ಯಾವನು ಕೇಡು ಮಾಡುವನು? ಆತನು ಮುಖವನ್ನು ಮರೆಮಾಡಿದರೆ ಆತನನ್ನು ದೃಷ್ಟಿಸುವವನು ಯಾರು? ಜನಾಂಗಕ್ಕೆ ವಿರೋಧವಾಗಿ ಮಾಡಿದರೂ ಸರಿ, ಮನುಷ್ಯ ಮಾತ್ರದ ವರಿಗಾದರೂ ಸರಿಯೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆತನು ನೆಮ್ಮದಿಯನ್ನು ದಯಪಾಲಿಸಿದರೆ ತಪ್ಪುಹೊರಿಸುವವರು ಯಾರು? ವಿಮುಖನಾದರೆ ಆತನ ದರ್ಶನ ಮಾಡುವವರಾರು? ಆತನು ಜನಾಂಗಕ್ಕಾಗಲಿ ಮನುಷ್ಯನಿಗಾಗಲಿ ಮಾಡುವದೆಲ್ಲಾ ಹೀಗೆಯೇ.
Kannada Bible (KNCL) BSI 2016
ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ದೇವರು ಸುಮ್ಮನಿದ್ದರೆ ಅವರ ಮೇಲೆ, ತಪ್ಪುಹೊರಿಸುವವರು ಯಾರು? ದೇವರು ತಮ್ಮ ಮುಖವನ್ನು ವ್ಯಕ್ತಿಗಾಗಲಿ, ದೇಶಕ್ಕಾಗಲಿ ಮರೆಮಾಡಿದರೆ, ದೇವದರ್ಶನ ಪಡೆಯಬಲ್ಲವರು ಯಾರು?