Job 36:30 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಗೋ, ದೇವರು ತನ್ನ ಪ್ರಕಾಶವನ್ನು ಆಕಾಶದಲ್ಲೆಲ್ಲಾ ಹರಡಿ ಸಮುದ್ರದ ಆಳವಾದ ಭಾಗಗಳನ್ನು ಬೆಳಕಿನಿಂದ ತುಂಬಿಸಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಗೋ, ತನ್ನ ಪ್ರಕಾಶವನ್ನು ಸುತ್ತಲು ಹರಡಿಕೊಂಡು, ಅದನ್ನು ಜಲಸಮೂಹಗಳಿಂದ ಮುಚ್ಚಿಕೊಳ್ಳುವನು.
Kannada BSI Bible 2016
ಇಗೋ, ತನ್ನ ಸುತ್ತಲೂ ಬೆಳಕನ್ನು ವಿಸ್ತರಿಸಿ ಸಮುದ್ರದ ಅಗಾಧವನ್ನು ಮುಚ್ಚುತ್ತಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಗೋ, ತನ್ನ ಪ್ರಕಾಶವನ್ನು ಸುತ್ತಲು ಹರಡಿಕೊಂಡು ಅದನ್ನು ಜಲಸಮೂಹಗಳಿಂದ ಕವಿಸಿಕೊಳ್ಳುವನು.
Kannada Bible (KNCL) BSI 2016
ಇಗೋ, ಪಸರಿಸುತ್ತಾನೆ ಸುತ್ತಲು ತನ್ನ ಬೆಳಕನ್ನು ಮುಚ್ಚಿಡುತ್ತಾನೆ ಕಡಲಿನ ಅಡಿಭಾಗವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಗೋ, ದೇವರು ಮಿಂಚನ್ನು ತಮ್ಮ ಸುತ್ತಲು ಚದರಿಸುತ್ತಾರೆ. ಸಮುದ್ರದ ಆಳವನ್ನು ಸಹ ಆವರಿಸುತ್ತಾರೆ.