Job 37:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೋಬನೇ, ದೇವರು ಮೋಡಗಳನ್ನು ಹೇಗೆ ಹತೋಟಿಯಲ್ಲಿಡುತ್ತಾನೆಂಬುದು ನಿನಗೆ ಗೊತ್ತಿದೆಯೋ? ದೇವರು ಸಿಡಿಲನ್ನು ಹೇಗೆ ಹೊಳೆಯ ಮಾಡುತ್ತಾನೆಂಬುದು ನಿನಗೆ ಗೊತ್ತಿದೆಯೋ?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೇವರು ಇವುಗಳನ್ನು ನಿಯಂತ್ರಿಸಿ, ತನ್ನ ಮೇಘದ ಸಿಡಿಲು ಹೊಳೆಯ ಮಾಡುವ ರೀತಿ ನಿನಗೆ ಗೊತ್ತಿದೆಯೋ?
Kannada BSI Bible 2016
ದೇವರು ಅವುಗಳಿಗೆ ಅಪ್ಪಣೆ ಕೊಡುವದನ್ನೂ ಆತನ ಮೇಘದ ಬೆಳಕು ಹೊಳೆಯುವದನ್ನೂ ನೀನು ತಿಳು ಕೊಳ್ಳುತ್ತೀಯೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ದೇವರು ಇವುಗಳಿಗೆ ನಿಯಮಮಾಡಿ ತನ್ನ ಮೇಘದ ಸಿಡಿಲು ಹೊಳೆಯ ಮಾಡುವ ರೀತಿ ನಿನಗೆ ಗೊತ್ತಿದೆಯೋ?
Kannada Bible (KNCL) BSI 2016
ದೇವರು ಹೇಗೆ ಮೋಡಗಳನು ನಿಯಂತ್ರಿಸುತ್ತಾನೆಂದು ಅರಿತಿರುವೆಯಾ? ಅವುಗಳಿಂದ ಸಿಡಿಲು ಹೇಗೆ ಹೊಳೆದುಬರುತ್ತದೆಂದು ತಿಳಿದಿರುವೆಯಾ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೇವರು ಮೋಡಗಳಿಗೆ ಅಪ್ಪಣೆ ಕೊಡುವುದನ್ನು ಅರಿತಿರುವೆಯಾ? ದೇವರ ಮೇಘದ ಸಿಡಿಲು ಹೊಳೆಯುವುದನ್ನೂ ನೀನು ತಿಳಿದಿರುವೆಯಾ?