Job 38:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೋಬನೇ, ಬೆಳಕನ್ನೂ ಕತ್ತಲೆಯನ್ನೂ ಅವುಗಳ ಉಗಮಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ? ಅಲ್ಲಿಗೆ ಹೋಗುವ ಮಾರ್ಗ ನಿನಗೆ ಗೊತ್ತಿದೆಯೋ?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀನು ಆ ಒಂದೊಂದನ್ನೂ ಅದರದರ ಪ್ರಾಂತ್ಯಕ್ಕೆ ಕರೆದುಕೊಂಡು ಹೋಗಿ, ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲೆಯಾ?
Kannada BSI Bible 2016
ಅದರ ಗಡಿಯ ವರೆಗೆ ಅದನ್ನು ತೆಗೆದುಕೊಳ್ಳುವಿಯೋ? ಅದರ ಮನೆಗೆ ಹೋಗುವ ಹಾದಿಗಳನ್ನು ಗ್ರಹಿಸಿದಿಯೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಆ ಒಂದೊಂದನ್ನೂ ಅದರದರ ಪ್ರಾಂತ್ಯಕ್ಕೆ ಕರಕೊಂಡು ಹೋಗಿ ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲಿಯಾ?
Kannada Bible (KNCL) BSI 2016
ನೀನು ಅವುಗಳನು ಅವುಗಳ ಪ್ರಾಂತ್ಯಕ್ಕೆ ಕರೆದೊಯ್ಯಬಲ್ಲೆಯಾ? ಅವುಗಳ ನಿವಾಸಕೆ ಹಾದಿಯನು ಕಂಡುಹಿಡಿಯಬಲ್ಲೆಯಾ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನು ಬೆಳಕನ್ನೂ ಕತ್ತಲನ್ನೂ ಅವುಗಳ ಸ್ಥಳಕ್ಕೆ ತೆಗೆದುಕೊಂಡು ಹೋಗಬಲ್ಲೆಯಾ? ಅವು ತಮ್ಮ ಮನೆಗಳಿಗೆ ಹೋಗುವ ಹಾದಿಗಳನ್ನು ನೀನು ಬಲ್ಲೆಯಾ?