Job 39:21 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಕುದುರೆಯು ತನಗಿರುವ ಬಾಹುಬಲದಲ್ಲಿ ಸಂತೋಷಪಡುತ್ತದೆ; ತನ್ನ ಪಾದದಿಂದ ನೆಲವನ್ನು ಕೆರೆಯುತ್ತದೆ. ಯುದ್ಧಕ್ಕೆ ವೇಗವಾಗಿ ಓಡುತ್ತಾ ಹೋಗುವುದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದು ತಗ್ಗಿನ ನೆಲವನ್ನು ಕೆರೆದು ತನ್ನ ಬಲಕ್ಕೆ ಹಿಗ್ಗಿ, ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೋಗುವುದು.
Kannada BSI Bible 2016
ಅದು ತಗ್ಗಿನಲ್ಲಿ ಕೆರೆಯುತ್ತದೆ; ತನ್ನ ಶಕ್ತಿಯಲ್ಲಿ ಸಂತೋಷಿಸುತ್ತದೆ; ಯುದ್ಧಸನ್ನದ್ಧರ ಎದು ರಾಗಿ ಹೊರಡುತ್ತದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದು ತಗ್ಗಿನ ನೆಲವನ್ನು ಕೆರೆದು ತನ್ನ ಬಲಕ್ಕೆ ಹಿಗ್ಗಿ ಸನ್ನಾಹದ ಸೈನ್ಯವನ್ನು ಎದುರಿಸಲು ಹೋಗುವದು.
Kannada Bible (KNCL) BSI 2016
ನೆಲವನು ಕೆರೆಯುತ್ತಾ, ತನ್ನ ಶಕ್ತಿಗಾಗಿ ಹಿಗ್ಗುತ್ತಾ ಸನ್ನದ್ಧ ಸೈನ್ಯವನು ಇದಿರಿಸುತ್ತಾ ನುಗ್ಗುತ್ತದೆ ನೋಡು!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕುದುರೆಯು ನೆಲವನ್ನು ಕೆರೆಯುತ್ತಾ ತನ್ನ ಶಕ್ತಿಯಲ್ಲಿ ಹಿಗ್ಗುತ್ತದೆ; ಸನ್ನದ್ಧವಾಗಿರುವ ಸೈನ್ಯವನ್ನು ಎದುರಿಸಲು ಹೊರಡುತ್ತದೆ.