Job 39:26 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
“ಯೋಬನೇ, ತನ್ನ ರೆಕ್ಕೆಗಳನ್ನು ಚಾಚಿಕೊಂಡು ದಕ್ಷಿಣದ ಕಡೆಗೆ ಹಾರುವ ಗಿಡುಗಕ್ಕೆ ನೀನು ಹಾರುವುದನ್ನು ಕಲಿಸಿದೆಯೋ?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗಿಡಗವು ತನ್ನ ರೆಕ್ಕೆಗಳನ್ನು ಹರಡಿ, ದಕ್ಷಿಣದಿಕ್ಕಿಗೆ ಹಾರುವುದು ನಿನ್ನ ವಿವೇಕದಿಂದಲೋ?
Kannada BSI Bible 2016
ಹದ್ದು ನಿನ್ನ ಜ್ಞಾನದಿಂದ ಹಾರುತ್ತದೋ? ತನ್ನ ರೆಕ್ಕೆಗಳನ್ನು ದಕ್ಷಿಣ ಕಡೆಗೆ ಚಾಚುತ್ತದೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ಗಿಡಗವು ತನ್ನ ರೆಕ್ಕೆಗಳನ್ನು ಹರಡಿ ತೆಂಕಣ ದಿಕ್ಕಿಗೆ ಹಾರುವದು ನಿನ್ನ ವಿವೇಕದಿಂದಲೋ?
Kannada Bible (KNCL) BSI 2016
ಗಿಡುಗವು ರೆಕ್ಕೆ ಹರಡುವುದನು ದಕ್ಷಿಣದಿಕ್ಕಿಗೆ ಹಾರಿ ವಲಸೆಹೋಗುವುದನು ನಿನ್ನಿಂದ ಕಲಿತದೆಂತು?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಯೋಬನೇ, ಗಿಡುಗವು ತನ್ನ ರೆಕ್ಕೆಗಳನ್ನು ಹರಡಿ, ದಕ್ಷಿಣದ ಕಡೆಗೆ ಹಾರುವುದು ನಿನ್ನ ಜ್ಞಾನದಿಂದಲೋ?