Job 4:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೂರ್ಯೋದಯ ಮತ್ತು ಸೂರ್ಯಾಸ್ತಮಾನಗಳ ನಡುವೆ ಅವರು ನಜ್ಜುಗುಜ್ಜಾಗುವರು. ಅವರು ಸತ್ತು ನಿತ್ಯ ನಾಶವಾಗುವುದನ್ನು ಯಾರೂ ಗಮನಿಸುವುದಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಉದಯಾಸ್ತಮಾನಗಳ ಮಧ್ಯದಲ್ಲಿ (ಜೀವಿಸಿ) ಜಜ್ಜಲ್ಪಡುತ್ತಾರೆ. ಹೀಗೆ ನಿತ್ಯನಾಶ ಹೊಂದುವುದನ್ನು ಯಾರೂ ಲಕ್ಷಿಸುವುದಿಲ್ಲ.
Kannada BSI Bible 2016
ಬೆಳಗಿ ನಿಂದ ಸಂಜೆಯ ವರೆಗೆ ಅವರು ನಾಶವಾಗುತ್ತಾರೆ. ಅವರು ಲಕ್ಷ್ಯವಿಲ್ಲದೆ ನಿತ್ಯ ನಾಶವಾಗುತ್ತಾರೆ.ಅವ ರಲ್ಲಿರುವ ಅವರ ಶ್ರೇಷ್ಠತೆ ಹೊರಟು ಹೋಗುವ ದಿಲ್ಲವೋ? ಅವರು ಜ್ಞಾನವಿಲ್ಲದೆ ಸಾಯುತ್ತಾರೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಉದಯಾಸ್ತಮಾನಗಳ ಮಧ್ಯದಲ್ಲಿ [ಜೀವಿಸಿ] ಜಜ್ಜಲ್ಪಡುತ್ತಾರೆ, ಹೀಗೆ ನಿತ್ಯನಾಶನಹೊಂದುವದನ್ನು ಯಾರೂ ಲಕ್ಷಿಸುವದಿಲ್ಲ.
Kannada Bible (KNCL) BSI 2016
ಅವರು ಉದಯಾಸ್ತಮಾನಗಳ ನಡುವೆ ಜಜ್ಜಿಹೋಗುವರು ಯಾರ ಲಕ್ಷ್ಯವೂ ಇಲ್ಲದೆ ನಿತ್ಯವಿನಾಶ ಹೊಂದುವರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೆಳಿಗ್ಗೆಯಿಂದ ಸಂಜೆಯವರೆಗೆ ಜೀವಿಸಿದ ಅವರು ನಾಶವಾಗುತ್ತಾರೆ; ಯಾರ ಗಮನಕ್ಕೂ ಬಾರದೇ ನಿತ್ಯ ನಾಶವಾಗುತ್ತಾರೆ.