Job 40:5 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾನು ಒಂದು ಸಲ ಮಾತಾಡಿದ್ದೇನೆ; ಆದರೆ ಪ್ರತಿವಾದ ಮಾಡಲಾರೆನು. ನಾನು ಎರಡು ಸಲ ಮಾತಾಡಿದ್ದೇನೆ; ಆದರೆ ನಾನು ಹೆಚ್ಚಿಗೆ ಏನೂ ಹೇಳಲಾರೆನು” ಅಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಒಂದು ಸಾರಿ ಮಾತನಾಡಿದ್ದೇನೆ, ಪ್ರತಿವಾದ ಮಾಡಲಾರೆನು; ಎರಡು ಸಲ ಹೌದು, ಇನ್ನೇನೂ ನುಡಿಯಲಾರೆನು” ಎಂದು ಹೇಳಿದನು.
Kannada BSI Bible 2016
ಒಂದು ಸಾರಿ ಮಾತಾಡಿದೆನು, ಆದರೆ ಉತ್ತರ ಕೊಡೆನು; ಹೌದು, ಎರಡು ಸಾರಿ. ಆದರೆ ಹೆಚ್ಚು ಮಾತಾಡೆನು ಅಂದೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಒಂದು ಸಾರಿ ಮಾತಾಡಿದ್ದೇನೆ, ಪ್ರತಿವಾದ ಮಾಡಲಾರೆನು; ಎರಡು ಸಲ ಹೌದು, ಇನ್ನೇನೂ ನುಡಿಯಲೊಲ್ಲೆನು ಎಂದು ಯೆಹೋವನಿಗೆ ಹೇಳಿದನು.
Kannada Bible (KNCL) BSI 2016
ಒಮ್ಮೆ ಮಾತಾಡಿದೆ, ಮತ್ತೆ ಮಾತಾಡೆನು ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು ಮಾತಾಡೆನು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಒಂದು ಸಾರಿ ಮಾತಾಡಿದೆ, ಈಗ ನನಗೆ ಕೊಡುವುದಕ್ಕೆ ಉತ್ತರ ಇಲ್ಲ; ಮತ್ತೆ ಮಾತಾಡುತ್ತಿದ್ದೇನೆ, ಆದರೆ ಮಾತಾಡಲು ನನಗೆ ಇನ್ನೇನೂ ಇಲ್ಲ,” ಎಂದನು.