Job 41:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಯೋಬನೇ, ನೀನು ಲಿವ್ಯಾತಾನನನ್ನು ಗಾಳದಿಂದ ಹಿಡಿಯಬಲ್ಲೆಯಾ? ನೀನು ಅದರ ನಾಲಿಗೆಯನ್ನು ಅದುಮಿ ಹಗ್ಗದಿಂದ ಕಟ್ಟಬಲ್ಲೆಯಾ?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಲಿವ್ಯಾತಾನ್ ಮೊಸಳೆಯನ್ನು ಮೀನು ಗಾಳದಿಂದ ಎಳೆಯುವಿಯೋ? ಹುರಿಯಿಂದ ಅದರ ನಾಲಿಗೆಯನ್ನು ಅದುಮಿ ಬಿಗಿಯುವಿಯೋ?
Kannada BSI Bible 2016
ಮೊಸಳೆಯನ್ನು ಗಾಳದಿಂದ ಎಳೆಯುವಿಯೋ? ಇಲ್ಲವೆ ಹಗ್ಗದಿಂದ ಅದರ ನಾಲಿಗೆಯನ್ನು ಅದುಮುತ್ತೀಯೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ನೀನು ಮೊಸಳೆಯನ್ನು ಗಾಳದಿಂದ ಎಳೆದು ಹುರಿಯಿಂದ ಅದರ ನಾಲಿಗೆಯನ್ನು ಅದುವಿು ಬಿಗಿಯುವಿಯೋ?
Kannada Bible (KNCL) BSI 2016
“’ಲಿವ್ಯತಾನ್’ ಮೊಸಳೆಯನು ಗಾಳದಿಂದ ಎಳೆಯಬಲ್ಲೆಯಾ? ಅದರ ನಾಲಿಗೆಯನು ಹಗ್ಗದಿಂದ ಬಿಗಿಯಬಲ್ಲೆಯಾ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಯೋಬನೇ, ಲಿವ್ಯಾತಾನ್ ಮೊಸಳೆಯನ್ನು ಗಾಳದಿಂದ ಎಳೆಯಬಲ್ಲೆಯಾ? ಹಗ್ಗದಿಂದ ಅದರ ನಾಲಿಗೆಯನ್ನು ಬಿಗಿಯಬಲ್ಲೆಯಾ?