Job 42:4 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಯೆಹೋವನೇ, ನೀನು ನನಗೆ, ‘ಯೋಬನೇ, ಆಲಿಸು; ನಾನು ಮಾತಾಡುತ್ತೇನೆ. ನಾನು ನಿನಗೆ ಪ್ರಶ್ನೆಗಳನ್ನು ಕೇಳುತ್ತೇನೆ. ನೀನು ನನಗೆ ಉತ್ತರಿಸು’ ಎಂದು ಹೇಳಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದಯಮಾಡಿ ಕೇಳು, ನಾನೇ ಮಾತನಾಡುವೆನು; ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು ಎಂದು ಅಪ್ಪಣೆಕೊಟ್ಟೆ.
Kannada BSI Bible 2016
ದಯ ಮಾಡಿ ಕೇಳು, ನಾನು ಮಾತಾಡುವೆನು; ನಾನು ಕೇಳು ತ್ತೇನೆ, ನೀನು ನನಗೆ ತಿಳಿಸು.
Kannada BSI JV (ಕನ್ನಡ ಸತ್ಯವೇದವು J.V. (BSI))
ದಯೆಮಾಡಿ ಕೇಳು, ನಾನೇ ಮಾತಾಡುವೆನು, ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು [ಎಂದು ಅಪ್ಪಣೆ ಕೊಟ್ಟಿಯಷ್ಟೆ].
Kannada Bible (KNCL) BSI 2016
‘ನಾನಾಡುವುದನು ಕಿವಿಗೊಟ್ಟು ಕೇಳು ನನ್ನ ಪ್ರಶ್ನೆಗೆ ಉತ್ತರ ನೀಡು’ ಎಂದು ನೀವು ಕೊಟ್ಟಿರಿ ಅಪ್ಪಣೆಯನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ತಾವು ನನಗೆ, ‘ನಾನು ನಿನ್ನನ್ನು ಪ್ರಶ್ನೆಮಾಡುವೆನು; ನೀನೇ ನನಗೆ ಉತ್ತರಕೊಡು,’ ಎಂದು ಅಪ್ಪಣೆ ಕೊಟ್ಟಿದ್ದೀರಿ.