Job 9:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆತನನ್ನು ಸೋಲಿಸೋಣವೆಂದರೆ ಆತನೇ ಬಲಿಷ್ಠನಾಗಿದ್ದಾನೆ; ನ್ಯಾಯಾಲಯಕ್ಕೆ ಹೋಗೋಣವೆಂದರೆ ಆತನನ್ನು ನ್ಯಾಯಾಲಯಕ್ಕೆ ಬರಮಾಡುವವನು ಯಾರು?
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಾನು ಬಲಿಷ್ಠನ ಶಕ್ತಿಯನ್ನು ಮೊರೆಹೋಗುವೆನೆಂದರೆ ದೇವರು, ‘ಇಗೋ, ಇದ್ದೇನೆ’ ಎನ್ನುವನು. ನ್ಯಾಯವಿಚಾರಣೆಯು ಆಗಲಿ ಎಂದರೆ ಆತನು ನನಗೆ, ‘ಕಾಲ ನಿಯಾಮಕರು ಯಾರು?’ ಎನ್ನುವನು.
Kannada BSI Bible 2016
ಶಕ್ತಿಯ ವಿಷಯದಲ್ಲಿ ಮಾತನಾಡಲೋ? ಇಗೋ, ಆತನು ಬಲವುಳ್ಳವನಾಗಿದ್ದಾನೆ. ನ್ಯಾಯದ ವಿಷಯವೋ ವಾದಿ ಸುವದಕ್ಕೆ ನನಗೆ ಕಾಲವನ್ನು ನಿಯಮಿಸುವವನು ಯಾರು?
Kannada BSI JV (ಕನ್ನಡ ಸತ್ಯವೇದವು J.V. (BSI))
ನಾನು ಬಲಿಷ್ಠನ ಶಕ್ತಿಯನ್ನು ಮರೆಹೊಗುವೆನೆಂದರೆ [ದೇವರು] - ಇಗೋ, [ಇದ್ದೇನೆ; ಅನ್ನುವನು] ನ್ಯಾಯವಿಚಾರಣೆಯು [ಆಗಲಿ ಎಂದರೆ ಆತನು] ನನಗೆ ಕಾಲನಿಯಾಮಕರು ಯಾರು [ಅನ್ನುವನು].
Kannada Bible (KNCL) BSI 2016
ಶಕ್ತಿಪ್ರಯೋಗದ ಮಾತೆತ್ತಿದರೆ, ‘ಇಗೋ, ನಾನೇ ಶಕ್ತಿಸ್ವರೂಪ’ ಎನ್ನುತ್ತಾನೆ. ನ್ಯಾಯವಿಚಾರಣೆ ಆಗಲಿಯೆಂದರೆ, ‘ನನ್ನನ್ನು ಕರೆಯಿಸುವವನಾರು?’ ಎನ್ನುತ್ತಾನೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಶಕ್ತಿಯ ವಿಷಯದಲ್ಲಿ ಹೇಳಬೇಕಾದರೆ, ಇಗೋ ದೇವರು ಬಲಶಾಲಿ! ನ್ಯಾಯದ ವಿಷಯದಲ್ಲಿ ವಾದಿಸಬೇಕಾದರೆ, ದೇವರಿಗೆ ಸವಾಲು ಹಾಕುವವರು ಯಾರು?