Joel 1:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹೊಲಗದ್ದೆಗಳೆಲ್ಲಾ ನಾಶವಾದವು. ಭೂಮಿಯೂ ಗೋಳಾಡುತ್ತಿರುವುದು. ಯಾಕೆಂದರೆ ಧಾನ್ಯವು ನಾಶವಾದವು. ಹೊಸ ದ್ರಾಕ್ಷಾರಸವು ಬತ್ತಿಹೋಯಿತು. ಎಣ್ಣೆಯು ಇಲ್ಲದೆಹೋಯಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೆಳೆ ಬೆಳೆಯುವ ಹೊಲವು ಹಾಳಾಗಿದೆ, ನೆಲವು ದುಃಖದಲ್ಲಿ ಮುಳುಗಿದೆ. ಏಕೆಂದರೆ ಧಾನ್ಯವು ನಾಶವಾಗಿದೆ, ಹೊಸ ದ್ರಾಕ್ಷಾರಸವು ಒಣಗಿದೆ, ಎಣ್ಣೆಯು ಕೆಟ್ಟುಹೋಗಿದೆ.
Kannada BSI Bible 2016
ಹೊಲವು ಹಾಳಾಗಿದೆ; ಭೂಮಿಯು ಗೋಳಾಡುತ್ತದೆ; ಧಾನ್ಯವು ಹಾಳಾಗಿದೆ; ಹೊಸ ದ್ರಾಕ್ಷಾರಸವು ಒಣಗಿದೆ; ಎಣ್ಣೆ ಬಾಡಿಹೋಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೊಲವು ಹಾಳಾಗಿದೆ, ದೇಶವು ದುಃಖಿಸುತ್ತದೆ, ಏಕಂದರೆ ಧಾನ್ಯವು ಸೂರೆಯಾಗಿದೆ, ದ್ರಾಕ್ಷಾರಸವು ತಗ್ಗಿದೆ, ಎಣ್ಣೆಯು ಕುಗ್ಗಿದೆ.
Kannada Bible (KNCL) BSI 2016
ಹೊಲಗದ್ದೆಗಳು ಹಾಳಾಗಿವೆ; ಧರೆ ದುಃಖಿಸುತ್ತಿದೆ; ಬಿತ್ತಿದ ದವಸಧಾನ್ಯ ಮಣ್ಣುಪಾಲಾಗಿದೆ; ದ್ರಾಕ್ಷಿಹಣ್ಣು ಒಣಗಿಹೋಗಿದೆ; ಎಣ್ಣೆ ಮರಗಳು ಬಾಡಿಹೋಗಿವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೊಲವು ಹಾಳಾಗಿದೆ; ಭೂಮಿಯು ಒಣಗಿದೆ, ಧಾನ್ಯವು ನಾಶವಾಗಿದೆ; ಹೊಸ ದ್ರಾಕ್ಷಾರಸವು ಒಣಗಿದೆ; ಎಣ್ಣೆ ತೀರಿಹೋಗಿದೆ.