Joel 1:12 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದ್ರಾಕ್ಷಿಬಳ್ಳಿಗಳು ಒಣಗಿಹೋಗಿವೆ ಮತ್ತು ಅಂಜೂರದ ಮರವು ಸಾಯುತ್ತಲಿದೆ. ದಾಳಿಂಬದ ಮರ, ಖರ್ಜೂರದ ಮರ, ಸೇಬಿನ ಮರ, ತೋಟದಲ್ಲಿರುವ ಎಲ್ಲಾ ಮರಗಳು ಒಣಗಿಹೋಗಿವೆ. ಜನರಲ್ಲಿರುವ ಸಂತೋಷವೂ ಬತ್ತಿಹೋಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದ್ರಾಕ್ಷಾಲತೆಯು ಒಣಗಿದೆ ಮತ್ತು ಅಂಜೂರದ ಗಿಡವು ಬಾಡಿಹೋಗಿದೆ; ದಾಳಿಂಬೆ, ಖರ್ಜೂರ ಮತ್ತು ಸೇಬು ಮರಗಳು ಹಾಗು ಹೊಲದ ಸಕಲ ವನವೃಕ್ಷಗಳು ಒಣಗಿ ಹೋಗಿವೆ. ಮನುಷ್ಯರು ಸೊರಗಿ ಸಂತೋಷವಿಲ್ಲದೆ ಕಳೆಗುಂದಿದ್ದಾರೆ.
Kannada BSI Bible 2016
ದ್ರಾಕ್ಷೇ ಬಳ್ಳಿ ಒಣಗಿಹೋಗಿದೆ; ಅಂಜೂರದಮರ ಬಾಡಿ ಹೋಗಿದೆ; ದಾಳಿಂಬರದಗಿಡವೂ ಖರ್ಜೂರದ ಗಿಡವೂ ಸೇಬು ಗಿಡವೂ ಹೊಲದ ಮರಗಳೆಲ್ಲವೂ ಒಣಗಿಹೋಗಿವೆ; ಸಂತೋಷವು ಮನುಷ್ಯರ ಪುತ್ರರನ್ನು ಬಿಟ್ಟು ಒಣಗಿಹೋಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ದ್ರಾಕ್ಷಾಲತೆಯು ಆಶಾಭಂಗಪಟ್ಟಿದೆ; ಅಂಜೂರದ ಗಿಡವು ಕ್ಷೀಣವಾಗಿದೆ; ದಾಳಿಂಬ, ಖರ್ಜೂರ, ಸೇಬು, ಅಂತು ಸಕಲ ವನವೃಕ್ಷಗಳು ಒಣಗಿವೆ, ಆನಂದವು ತಗ್ಗಿ ನರಜನ್ಮದವರಿಗೆ ತಪ್ಪಿಹೋಗಿದೆ.
Kannada Bible (KNCL) BSI 2016
ದ್ರಾಕ್ಷಾಲತೆ ಒಣಗಿದೆ; ಅಂಜೂರದ ಗಿಡ ಬಾಡಿಹೋಗಿದೆ; ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ. ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದ್ರಾಕ್ಷಾಲತೆ ಒಣಗಿದೆ; ಅಂಜೂರದ ಗಿಡ ಬಾಡಿ ಹೋಗಿದೆ; ದಾಳಿಂಬೆ, ಖರ್ಜೂರ, ಸೇಬು ಮುಂತಾದ ಫಲವೃಕ್ಷಗಳು ಒಣಗಿ ಬೆಂಡಾಗಿವೆ. ನರಮಾನವರು ಸೊರಗಿ ಸಂತೋಷವಿಲ್ಲದೆ ಸಪ್ಪೆಯಾಗಿದ್ದಾರೆ.