Joel 1:17 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಾವು ಬೀಜ ಬಿತ್ತಿದೆವು. ಆದರೆ ಅವು ಒಣಗಿ, ಸತ್ತು ಈಗ ನೆಲದ ಮೇಲೆ ಬಿದ್ದಿವೆ. ನಮ್ಮ ಗಿಡಗಳೆಲ್ಲಾ ಒಣಗಿ ಸತ್ತಿವೆ. ನಮ್ಮ ಉಗ್ರಾಣವು ಬರಿದಾಗಿದ್ದು ಬೀಳುತ್ತಲಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೀಜಗಳು, ಹೆಂಟೆಗಳ ಕೆಳಗೆ ಕೆಟ್ಟುಹೋಗಿವೆ. ಉಗ್ರಾಣಗಳು ಬರಿದಾಗಿವೆ. ಕಣಜಗಳು ಕೆಡವಲ್ಪಟ್ಟಿವೆ, ಏಕೆಂದರೆ ಧಾನ್ಯವು ಒಣಗಿದೆ.
Kannada BSI Bible 2016
ಬೀಜವು ಅವರ ಹೆಂಟೆಗಳ ಕೆಳಗೆ ಕೆಟ್ಟುಹೋಗಿದೆ; ಉಗ್ರಾಣಗಳು ನಾಶವಾಗಿವೆ; ಕಣಜಗಳು ಕೆಡವಲ್ಪ ಟ್ಟಿವೆ; ಧಾನ್ಯವು ಒಣಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೀಜಗಳು ಹೆಂಟೆಗಳ ಕೆಳಗೆ ಒಣಗುತ್ತವೆ; ಹಗೇವುಗಳು ಬರಿದಾಗಿವೆ, ಕಣಜಗಳು ಬಿದ್ದುಹೋಗಿವೆ; ಧಾನ್ಯಕ್ಕೆ ಸಂಕೋಚವಾಯಿತಷ್ಟೆ.
Kannada Bible (KNCL) BSI 2016
ಬೀಜಗಳು ಹೆಂಟೆಗಳ ಅಡಿಯಲ್ಲೇ ಒಣಗುತ್ತಿವೆ; ಉಗ್ರಾಣಗಳು ಬರಿದಾಗಿವೆ; ದವಸಧಾನ್ಯದ ಕೊರತೆಯಿಂದ ಕಣಜಗಳು ಕುಸಿದುಬಿದ್ದಿವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬೀಜಗಳು ಹೆಂಟೆಗಳ ಕೆಳಗೆ ಕೆಟ್ಟು ಹೋಗಿವೆ. ಉಗ್ರಾಣಗಳು ನಾಶವಾಗಿವೆ. ಕಣಜಗಳು ಕುಸಿದುಬಿದ್ದಿವೆ. ಏಕೆಂದರೆ ಧಾನ್ಯವು ಒಣಗಿದೆ.