Joel 1:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಯೆಹೋವನೇ, ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುತ್ತಿದ್ದೇನೆ. ನಮ್ಮ ಹಸಿರು ಹೊಲಗದ್ದೆಗಳು ಬೆಂಕಿಯಿಂದ ಮರುಭೂಮಿಯಾದವು. ಹೊಲದಲ್ಲಿದ್ದ ಮರಗಳನ್ನೆಲ್ಲಾ ಬೆಂಕಿಯು ದಹಿಸಿತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನೇ, ನಿನಗೆ ಮೊರೆಯಿಡುತ್ತೇನೆ; ಕಾಡಿನ ಹುಲ್ಲುಗಾವಲನ್ನು ಬೆಂಕಿಯು ನುಂಗಿಬಿಟ್ಟಿದೆ, ವನವೃಕ್ಷಗಳನ್ನೆಲ್ಲಾ ಜ್ವಾಲೆಯು ಸುಟ್ಟುಬಿಟ್ಟಿದೆ.
Kannada BSI Bible 2016
ಓ ಕರ್ತನೇ, ನಿನಗೆ ನಾನು ಮೊರೆಯಿಡುತ್ತೇನೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ನುಂಗಿಬಿಟ್ಟಿದೆ; ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿದೆ.ಅಡವಿಯ ಮೃಗಗಳು ಸಹ ನಿನ್ನ ಕಡೆಗೆ ಹೂಂಕರಿಸುತ್ತವೆ; ನೀರಿನ ಹೊಳೆಗಳು ಬತ್ತಿ ಹೋಗಿವೆ; ಬೆಂಕಿಯು ಅಡವಿಯ ಮೇವಿನ ಸ್ಥಳಗಳನ್ನು ದಹಿಸಿಬಿಟ್ಟಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೆಹೋವಾ, ನಿನಗೆ ಮೊರೆಯಿಡುತ್ತೇನೆ; ಕಾಡಿನ ಹುಲ್ಗಾವಲನ್ನು ಕಿಚ್ಚು ನುಂಗಿಬಿಟ್ಟಿದೆಯಲ್ಲಾ; ವನವೃಕ್ಷಗಳನ್ನೆಲ್ಲಾ ಬೇಗೆಯು ಸುಟ್ಟುಹಾಕಿದೆ.
Kannada Bible (KNCL) BSI 2016
ಸರ್ವೇಶ್ವರಾ, ನಿನಗೆ ಮೊರೆಯಿಡುತ್ತೇನೆ. ಹುಲ್ಲುಗಾವಲನ್ನು ಕಾಳ್ಗಿಚ್ಚು ದಹಿಸಿಬಿಟ್ಟಿದೆ; ವನವೃಕ್ಷಗಳೆಲ್ಲ ಬೆಂಕಿಪಾಲಾಗಿವೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ. ಬೆಂಕಿಯು ಹುಲ್ಲುಗಾವಲನ್ನು ದಹಿಸಿಬಿಟ್ಟಿದೆ; ಜ್ವಾಲೆಯು ಅಡವಿಯ ಮರಗಳನ್ನೆಲ್ಲಾ ಸುಟ್ಟುಬಿಟ್ಟಿವೆ.