Joel 2:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ನನ್ನ ಸೈನ್ಯವನ್ನು ಕಳುಹಿಸಿದೆನು. ಮಿಡತೆಗಳ ಗುಂಪು, ದೊಡ್ಡ ಮಿಡತೆ, ನಾಶಮಾಡುವ ಮಿಡತೆ, ಹಾರುವ ಮಿಡತೆ, ಚೂರಿ ಮಿಡತೆಗಳು ಬಂದು ನಿಮಗಿದ್ದದ್ದನ್ನೆಲ್ಲಾ ತಿಂದುಬಿಟ್ಟವು. ಆದರೆ ಯೆಹೋವನಾದ ನಾನು ನಿಮ್ಮ ಸಂಕಟಕಾಲಕ್ಕೆ ಬದಲಾಗಿ ಸುಭಿಕ್ಷ ಕಾಲವನ್ನು ದಯಪಾಲಿಸುವೆನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗುಂಪು ಮಿಡತೆಗಳು, ಸಣ್ಣ ಮಿಡತೆಗಳು, ದೊಡ್ಡ ಮಿಡತೆಗಳು, ಚೂರಿ ಮಿಡತೆಗಳು, ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ ವರ್ಷಗಳನ್ನು ನಾನು ನಿಮಗೆ ತಿರುಗಿಕೊಡುವೆನು.
Kannada BSI Bible 2016
ನಾನು ನಿಮ್ಮಲ್ಲಿ ಕಳುಹಿಸದಂಥ, ನನ್ನ ದೊಡ್ಡ ಸೈನ್ಯವಾದ ಹುಳವೂ ಕಂಬಳಿ ಹುಳವೂ ಒಳಗೆ ನಾಶಮಾಡುವ ಹುಳವೂ ಮಿಡತೆಗಳೂ ತಿಂದ ವರುಷಗಳಿಗೆ ಬದಲಾಗಿ ನಿಮಗೆ ಕೊಡುವೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಗುಂಪುವಿುಡತೆ, ಸಣ್ಣವಿುಡತೆ, ದೊಡ್ಡವಿುಡತೆ, ಚೂರಿವಿುಡತೆ, ಅಂತು ನಾನು ನಿಮ್ಮ ಮೇಲೆ ಕಳುಹಿಸಿದ ನನ್ನ ದೊಡ್ಡ ದಂಡು ತಿಂದುಬಿಟ್ಟ ವರುಷಗಳನ್ನು ನಾನು ನಿಮಗೆ ಕಟ್ಟಿಕೊಡುವೆನು.
Kannada Bible (KNCL) BSI 2016
ಗುಂಪುಮಿಡತೆ, ಕಂಬಳಿಮಿಡತೆ, ಚೂರಿಮಿಡತೆ, ನಾನು ಕಳುಹಿಸಿದ ಈ ಮಿಡತೆಗಳ ಸೈನ್ಯಗಳು ತಿಂದು ನಷ್ಟಮಾಡಿದ ವರ್ಷಗಳನ್ನು ನಿಮಗೆ ಭರಿಸಿಕೊಡುವೆನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನಾನು ನಿಮ್ಮಲ್ಲಿ ಕಳುಹಿಸಿದಂಥ ನನ್ನ ದೊಡ್ಡ ಸೈನ್ಯವಾದ ಮಿಡತೆಗಳು, ಗುಂಪು ಮಿಡತೆಗಳು, ಕಂಬಳಿ ಮಿಡತೆಗಳು, ಚೂರಿ ಮಿಡತೆಗಳು ತಿಂದು ಬಿಟ್ಟ ವರ್ಷಗಳನ್ನು ನಿಮಗೆ ಪುನಃಸ್ಥಾಪಿಸಿ ಕೊಡುವೆನು.