Joel 3:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬೆಳೆಯು ಪಕ್ವವಾಗಿದೆ; ಕುಡುಗೋಲನ್ನು ತನ್ನಿರಿ. ಬನ್ನಿ, ದ್ರಾಕ್ಷಿಯನ್ನು ಆಲೆಯಲ್ಲಿ ತುಳಿಯಿರಿ, ಯಾಕೆಂದರೆ ಆಲೆಯು ತುಂಬಿಹೋಗಿದೆ. ಪಿಪಾಯಿಗಳು ತುಂಬಿತುಳುಕುತ್ತಿವೆ, ಯಾಕೆಂದರೆ ಅವರ ದುಷ್ಟತ್ವವು ವಿಪರೀತವಾಗಿದೆ!
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆಹೋವನ ಸೈನ್ಯದವರೇ, ಕುಡುಗೋಲನ್ನು ಹಾಕಿರಿ, ಫಲವು ಪಕ್ವವಾಗಿದೆ. ಬನ್ನಿರಿ, ದ್ರಾಕ್ಷಿಯನ್ನು ತುಳಿಯಿರಿ, ದ್ರಾಕ್ಷಿಯ ಅಲೆಯು ತುಂಬಿದೆ. ತೊಟ್ಟಿಗಳು ತುಂಬಿ ತುಳುಕುತ್ತಿವೆ. ಜನಾಂಗಗಳ ದುಷ್ಟತನವು ವಿಪರೀತವಾಗಿದೆ.
Kannada BSI Bible 2016
ಕುಡುಗೋಲನ್ನು ಹಾಕಿರಿ, ಬೆಳೆ ಪಕ್ವವಾಯಿತು; ಬಂದು ಇಳಿಯಿರಿ; ದ್ರಾಕ್ಷೆಯ ಅಲೆ ತುಂಬಿ ಅದೆ; ತೊಟ್ಟಿಗಳು ತುಳುಕುತ್ತವೆ; ಅವರ ಕೆಟ್ಟತನವು ಬಹಳವಾಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
[ಯೆಹೋವನ ಶೂರರೇ,] ಕುಡುಗೋಲನ್ನು ಹಾಕಿರಿ, ಫಲವು ಪಕ್ವವಾಗಿದೆ; ಬನ್ನಿರಿ, ತುಳಿಯಿರಿ; ದ್ರಾಕ್ಷೆಯ ಆಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿತುಳುಕುತ್ತಿವೆ; ಜನಾಂಗಗಳ ದುಷ್ಟತನವು ವಿಪರೀತವೇ ಸರಿ.
Kannada Bible (KNCL) BSI 2016
ಸ್ವಾಮಿಯ ಶೂರರೇ, ಕುಡುಗೋಲನ್ನು ಹಾಕಿರಿ; ಫಲ ಪಕ್ವವಾಗಿದೆ. ಬನ್ನಿ, ದ್ರಾಕ್ಷಿಯನ್ನು ತುಳಿಯಿರಿ; ಆಲೆಯು ಭರ್ತಿಯಾಗಿದೆ, ತೊಟ್ಟಿಗಳು ತುಂಬಿತುಳುಕುತ್ತಿವೆ; ರಾಷ್ಟ್ರಗಳ ದುಷ್ಟತನವು ಮಿತಿಮೀರಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಕುಡುಗೋಲನ್ನು ಹಾಕಿರಿ. ಏಕೆಂದರೆ ಬೆಳೆ ಪಕ್ವವಾಯಿತು. ಬಂದು ಇಳಿಯಿರಿ. ಏಕೆಂದರೆ ದ್ರಾಕ್ಷಿಯ ಆಲೆ ತುಂಬಿ ಇದೆ. ತೊಟ್ಟಿಗಳು ತುಳುಕುವಂತೆ ಅವರ ಕೆಟ್ಟತನವು ಬಹಳವಾಗಿದೆ.