Joel 3:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಿಮ್ಮ ಗಂಡು ಹೆಣ್ಣುಮಕ್ಕಳನ್ನು ನಾನು ಯೆಹೂದದ ಜನರಿಗೆ ಮಾರುವೆನು. ಅವರು ಅವರನ್ನು ಬಹುದೂರದಲ್ಲಿ ಶೆಬದ ಜನರಿಗೆ ಮಾರಿಬಿಡುವರು.” ಇದು ಯೆಹೋವನ ನುಡಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿಮ್ಮ ಗಂಡು ಮತ್ತು ಹೆಣ್ಣು ಮಕ್ಕಳನ್ನು, ಯೆಹೂದ್ಯರಿಗೆ ಮಾರುವೆನು. ಅವರು ಆ ಮಕ್ಕಳನ್ನು ದೂರದ ಜನಾಂಗವಾದ, ಶೆಬದವರಿಗೆ ಮಾರಿಬಿಡುವರು. ಯೆಹೋವನೇ ಇದನ್ನು ನುಡಿದಿದ್ದಾನೆ.
Kannada BSI Bible 2016
ನಿಮ್ಮ ಕುಮಾರರನ್ನೂ ನಿಮ್ಮ ಕುಮಾರ್ತೆ ಯರನ್ನೂ ಯೆಹೂದನ ಮಕ್ಕಳ ಕೈಯಲ್ಲಿ ಮಾರುವೆನು; ಇವರು ಅವರನ್ನು ದೂರ ಜನವಾದ ಶೆಬದನರಿಗೆ ಮಾರುವರು; ಕರ್ತನು ಅದನ್ನು ಹೇಳಿದ್ದಾನೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನಿಮ್ಮ ಗಂಡುಹೆಣ್ಣು ಮಕ್ಕಳನ್ನು ಯೆಹೂದ್ಯರಿಗೆ ಮಾರುವೆನು; ಅವರು ಅವರನ್ನು ದೂರದ ಜನಾಂಗವಾದ ಶೆಬದವರಿಗೆ ಮಾರಿಬಿಡುವರು; ಯೆಹೋವನೇ ಇದನ್ನು ನುಡಿದಿದ್ದಾನೆ.
Kannada Bible (KNCL) BSI 2016
ನಿಮ್ಮ ಪುತ್ರಪುತ್ರಿಯರನ್ನು ಯೆಹೂದ್ಯರಿಗೆ ಮಾರುವೆನು, ಅವರು ಆ ಮಕ್ಕಳನ್ನು ದೂರದಲ್ಲಿರುವ ಶೆಬದವರಿಗೆ ಮಾರಿಬಿಡುವರು. ಸರ್ವೇಶ್ವರನಾದ ನನ್ನ ನುಡಿಯಿದು.”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮ ಪುತ್ರರನ್ನೂ ನಿಮ್ಮ ಪುತ್ರಿಯರನ್ನೂ ಯೆಹೂದದ ಜನರಿಗೆ ಮಾರುವೆನು. ಇವರು ಅವರನ್ನು ದೂರ ಜನವಾದ ಶೆಬದವರಿಗೆ ಮಾರುವರು.” ಯೆಹೋವ ದೇವರು ಇದನ್ನು ಹೇಳಿದ್ದಾರೆ.