John 1:38 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೇಸು ಹಿಂತಿರುಗಿ ನೋಡಿ, “ನಿಮಗೇನು ಬೇಕು?” ಎಂದು ಕೇಳಿದನು. ಆ ಇಬ್ಬರು, “ರಬ್ಬಿ, ನೀನು ಎಲ್ಲಿ ಇಳಿದುಕೊಂಡಿರುವೆ?” ಎಂದು ಕೇಳಿದರು. (“ರಬ್ಬಿ” ಅಂದರೆ “ಗುರು” ಎಂದರ್ಥ.)
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೇಸು ಹಿಂತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಲು ಅವರು, “ರಬ್ಬಿಯೇ, (ಅಂದರೆ ಗುರುವೇ) ನೀನು ವಾಸಿಸುವುದು ಎಲ್ಲಿ?” ಎಂದು ಕೇಳಿದರು.
Kannada BSI Bible 2016
ಆಗ ಯೇಸು ಹಿಂತಿರುಗಿ ತನ್ನ ಹಿಂದೆ ಬರುತ್ತಿದ್ದವರನ್ನು ನೋಡಿ ಅವರಿಗೆ--ನೀವು ಏನು ಹುಡುಕುತ್ತೀರಿ? ಅನ್ನಲು ಅವರು ಆತನಿಗೆ--ರಬ್ಬಿಯೇ, (ರಬ್ಬಿ ಅಂದರೆ ಗುರು ಎಂದರ್ಥ) ನೀನು ವಾಸಿಸುವದು ಎಲ್ಲಿ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೇಸು ಹಿಂತಿರುಗಿ ಅವರು ತನ್ನ ಹಿಂದೆ ಬರುವದನ್ನು ಕಂಡು - ನಿಮಗೆ ಏನು ಬೇಕಾಗಿದೆ ಎಂದು ಕೇಳಲು ಅವರು - ರಬ್ಬಿಯೇ, ನೀನು ಇಳುಕೊಂಡಿರುವದು ಎಲ್ಲಿ? ಅಂದರು. (ರಬ್ಬಿ ಅಂದರೆ ಗುರು).
Kannada Bible (KNCL) BSI 2016
ಯೇಸು ಸ್ವಾಮಿ, ತಮ್ಮನ್ನು ಹಿಂಬಾಲಿಸಿ ಬರುತ್ತಿರುವುದನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಿದರು. ಅವರು, “ರಬ್ಬೀ, ತಾವು ವಾಸಮಾಡುವುದೆಲ್ಲಿ?” ಎಂದು ವಿಚಾರಿಸಿದರು. (’ರಬ್ಬಿ’ ಎಂದರೆ ಗುರುದೇವ ಎಂದು ಅರ್ಥ.)
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೇಸು ಹಿಂತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಲು, ಅವರು, “ಬೋಧಕರೇ, ನೀವು ವಾಸಿಸುವುದು ಎಲ್ಲಿ?” ಎಂದು ಕೇಳಿದರು.