John 11:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯೇಸು ಬರುತ್ತಿದ್ದಾನೆ ಎಂಬ ಸುದ್ದಿಯನ್ನು ಕೇಳಿ ಮಾರ್ಥಳು ಆತನನ್ನು ವಂದಿಸಲು ಹೊರಗೆ ಹೋದಳು. ಆದರೆ ಮರಿಯಳು ಮನೆಯಲ್ಲೇ ಇದ್ದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಹೀಗಿರುವಲ್ಲಿ ಮಾರ್ಥಳು ಯೇಸು ಬರುತ್ತಾನೆಂದು ಕೇಳಿ ಆತನನ್ನು ಎದುರುಗೊಳ್ಳುವುದಕ್ಕೆ ಎದ್ದು ಹೋದಳು. ಆದರೆ ಮರಿಯಳು ಮನೆಯಲ್ಲೇ ಉಳಿದುಕೊಂಡಿದ್ದಳು.
Kannada BSI Bible 2016
ಆಗ ಯೇಸು ಬರುತ್ತಿದ್ದಾನೆಂದು ಮಾರ್ಥಳು ಕೇಳು ತ್ತಲೇ ಹೋಗಿ ಆತನನ್ನು ಎದುರುಗೊಂಡಳು. ಮರಿಯಳಾದರೋ ಮನೆಯಲ್ಲಿಯೇ ಕೂತುಕೊಂಡಿ ದ್ದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗಿರುವಲ್ಲಿ ಮಾರ್ಥಳು ಯೇಸು ಬರುತ್ತಾನೆಂದು ಕೇಳಿ ಆತನನ್ನು ಎದುರುಗೊಳ್ಳುವದಕ್ಕೆ ಹೋದಳು; ಆದರೆ ಮರಿಯಳು ಮನೆಯಲ್ಲೇ ಕೂತುಕೊಂಡಿದ್ದಳು.
Kannada Bible (KNCL) BSI 2016
ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೇಸು ಬರುತ್ತಿದ್ದಾರೆಂದು ಮಾರ್ಥಳು ಕೇಳಿದಾಗ ಅವರನ್ನು ಎದುರುಗೊಳ್ಳಲು ಹೋದಳು. ಆದರೆ ಮರಿಯಳು ಮನೆಯಲ್ಲಿಯೇ ಕುಳಿತುಕೊಂಡಿದ್ದಳು.